

ಸಿಂಧನೂರು: ಆಧಾರ್ ನೋಂದಣಿ ಹಾಗೂ ತಿದ್ದುಪಡಿಗೆ ಸೂಕ್ತ ವ್ಯವಸ್ಥೆ ಇಲ್ಲದೆ ಸ್ಥಳೀಯರು ಪರದಾಡುವಂತಾಗಿದೆ.
ತಾಲೂಕು ಕಚೇರಿಯಲ್ಲಿ ಮಾತ್ರ ಆಧಾರ್ ನೋಂದಣಿ ಕೇಂದ್ರ ಇದ್ದು ನಿತ್ಯ ಜನರು ಗಂಟೆಗಟ್ಟಲೆ ಸಾಲು ನಿಲ್ಲಬೇಕಿದೆ. ಶಾಲೆಗಳ ಪ್ರವೇಶ, ಪಡಿತರ ಯೋಜನೆ, ಬ್ಯಾಂಕ್ ಖಾತೆ ಆರಂಭ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯಲು ಆಧಾರ್ ಅವಶ್ಯವಾಗಿದೆ. ಆದರೆ, ತಾಲೂಕು ಕೇಂದ್ರದಲ್ಲೇ ಆಧಾರ್ ನೋಂದಣಿಗೆ ಸಮರ್ಪಕ ವ್ಯವಸ್ಥೆ ಇಲ್ಲದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಸಾರ್ವಜನಿಕರು ಪದೇಪದೆ ಕೇಂದ್ರಕ್ಕೆ ಅಲೆದಾಡುವಂತಾಗಿದೆ.