ಶಾಂತಿ-ಸೌಹಾರ್ದ ಪ್ರಗತಿಯ ಅಡಿಗಲ್ಲು

ಸಿಂಧನೂರಿನಲ್ಲಿ ಶುಕ್ರವಾರ ಮಹಾತ್ಮ ಗಾಂಧೀಜಿಯವರ ಹುತಾತ್ಮ ದಿನ ಅಂಗವಾಗಿ ನಗರದಲ್ಲಿ ಎಡ ಪಕ್ಷದ ಸಾಮೂಹಿಕ ಸಂಘಟನೆಗಳು ಮನರೇಗಾ ರದ್ದತಿ ವಿರೋಧಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದವು. ಸಮುದಾಯ ಸಂಘಟನೆ ತಾಲೂಕು ಅಧ್ಯಕ್ಷ ಶರಬಣ್ಣ ನಾಗಲಾಪುರ, ಸಮುದಾಯ ಸಂಘಟನೆ ಮಾಜಿ ಅಧ್ಯಕ್ಷ ಎಂ.ಗೋಪಾಲಕೃಷ್ಣ, ಎಸ್.ದೇವೆಂದ್ರಗೌಡ, ಅಪ್ಪಣ್ಣ ಕಾಂಬ್ಳೆ, ಶಕುಂತಲಾ ಪಾಟೀಲ್, ಲಕ್ಷ್ಮೀ ತುರ್ವಿಹಾಳ ಇದ್ದರು.

Published on
ಸಿಂಧನೂರು: ಮಹಾತ್ಮ ಗಾಂಧೀಜಿ ಹುತಾತ್ಮ ದಿನ ಅಂಗವಾಗಿ ನಗರದಲ್ಲಿ ಶುಕ್ರವಾರ ಎಡ ಪಕ್ಷದ ಸಾಮೂಹಿಕ ಸಂಘಟನೆಗಳು ಸೇರಿ ವಿಚಾರಸಂಕಿರಣ ಮತ್ತು ಮನರೇಗಾ ರದ್ದತಿ ವಿರೋಧಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದವು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘ, ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ಹಾಗೂ ಸಮುದಾಯ ಕರ್ನಾಟಕ ಸಂಘಟನೆ ನೇತೃತ್ವ ವಹಿಸಿಕೊಂಡಿದ್ದವು. ಸೌಹಾದರ್ ಮತ್ತು ಗಾಂಧೀಜಿ ಕುರಿತು ಹಾಗೂ ವಿಬಿ ಜಿ ರಾಮ್ ಜಿ ಕುರಿತು ವಿಚಾರಗೊಷ್ಠಿ ನಡೆಸಲಾಯಿತು.
ಸಮುದಾಯ ಸಂಘಟನೆ ತಾಲೂಕು ಅಧ್ಯಕ್ಷ ಶರಬಣ್ಣ ನಾಗಲಾಪುರ ಮಾತನಾಡಿ, ಶಾಂತಿ ಮತ್ತು ಸೌಹಾರ್ದ ಯಾವುದೇ ಸಮಾಜದ ಪ್ರಗತಿಯ ಅಡಿಗಲ್ಲುಗಳಾಗಿವೆ. ಹತ್ತಾರು ಮತ ಧರ್ಮಗಳು, ನೂರಾರು ಪಂಥಗಳು, ಸಾವಿರಾರು ಜಾತಿ, ಭಾಷೆಗಳನ್ನುಳ್ಳ ಈ ಬಹುತ್ವದ ನಾಡಿನಲ್ಲಿ ಸಾರ್ವಜನಿಕ ಜೀವನದಲ್ಲಿ ಜಾತಿ-ಮತ-ಪಂಥಗಳ ಗಡಿಗಳನ್ನು ಮೀರಿ ಯೋಚಿಸುವ ಸಾಮೂಹಿಕ ವಿವೇಕ ಸಮಾಜದ ಅನಿವಾರ್ಯವಾಗಿದೆಂದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತರಾಯಗೌಡ ಕಲ್ಲೂರು ಮಾತನಾಡಿ, ಮನರೇಗಾ ಹಿಂಪಡೆದು ವಿಬಿ ಜಿ ರಾಮ್ ಜಿ ತಂದಿರುವ ಕೇಂದ್ರ ಬಿಜೆಪಿ ಸರ್ಕಾರ ಮಹಾತ್ಮಗಾಂಧಿ ಹೆಸರು ಬದಲಿಸುವ ಮೂಲಕ ಗಾಂಧಿಗೆ ಅಪಮಾನ ಮಾಡಿದೆ. ಮನರೇಗಾದಲ್ಲಿರುವ ಮಹುಮುಖ್ಯ ಭಾಗವಾದ ಉದ್ಯೋಗದ ಹಕ್ಕನ್ನೆ ಹೊಸ ಯೋಜನೆ ಕಸಿದುಕೊಂಡಿದೆ. ಗ್ರಾಪಂ ಸದಸ್ಯರ ಹಕ್ಕನ್ನು ಮೊಟಕುಗೊಳಿಸಿದೆಂದರು.
ಸಮುದಾಯ ಸಂಘಟನೆ ಮಾಜಿ ಅಧ್ಯಕ್ಷ ಎಂ.ಗೋಪಾಲಕೃಷ್ಣ, ಎಸ್.ದೇವೇಂದ್ರಗೌಡ, ಅಪ್ಪಣ್ಣ ಕಾಂಬ್ಳೆ, ಶಕುಂತಲಾ ಪಾಟೀಲ್, ಲಕ್ಷ್ಮೀ ತುರ್ವಿಹಾಳ, ವಿರೂಪಾಕ್ಷಗೌಡ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net