ಬಾಕಿ ಕೂಲಿ ಹಣ ಪಾವತಿಸಲಿ

ಸಾಲಗುಂದ ಗ್ರಾಪಂ ಮುಂದೆ ಕರ್ನಾಟಕ ಕೃಷಿ ಕೂಲಿಕಾರರು ಮತ್ತು ಗ್ರಾಮೀಣ ಕಾರ್ಮಿಕರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಸಂಘದ ತಾಲೂಕು ಘಟಕದ ಕಾರ್ಯದರ್ಶಿ ಅಪ್ಪಣ್ಣ ಕಾಂಬಳೆ, ಕೆಂಗಲ್ ಗ್ರಾಮ ಘಟಕದ ಶಂಕ್ರಪ್ಪ್ಪ, ಪ್ರಮುಖರಾದ ಹುಸೇನಪ್ಪ ದಢೇಸುಗೂರು, ಮೌಲಪ್ಪ ಕೆಂಗಲ್, ಹಂಪಮ್ಮ, ರೇಣುಕಮ್ಮ ಇತರರಿದ್ದರು.
ಸಾಲಗುಂದ ಗ್ರಾಪಂ ಮುಂದೆ ಕರ್ನಾಟಕ ಕೃಷಿ ಕೂಲಿಕಾರರು ಮತ್ತು ಗ್ರಾಮೀಣ ಕಾರ್ಮಿಕರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಸಂಘದ ತಾಲೂಕು ಘಟಕದ ಕಾರ್ಯದರ್ಶಿ ಅಪ್ಪಣ್ಣ ಕಾಂಬಳೆ, ಕೆಂಗಲ್ ಗ್ರಾಮ ಘಟಕದ ಶಂಕ್ರಪ್ಪ್ಪ, ಪ್ರಮುಖರಾದ ಹುಸೇನಪ್ಪ ದಢೇಸುಗೂರು, ಮೌಲಪ್ಪ ಕೆಂಗಲ್, ಹಂಪಮ್ಮ, ರೇಣುಕಮ್ಮ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೃಷಿ ಕೂಲಿಕಾರರ ಸಂಘ ಆಗ್ರಹ
  • ವಿರುಪಾಪುರ, ದಢೇಸುಗೂರು, ಗ್ರಾಪಂ ಮುಂದೆ ಪ್ರತಿಭಟನೆ
ಸಿಂಧನೂರು: ಬಾಕಿ ಕೂಲಿ ಪಾವತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಕೃಷಿ ಕೂಲಿಕಾರರು ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ತಾಲೂಕು ಘಟಕದಿಂದ ತಾಲೂಕಿನ ವಿರುಪಾಪುರ, ದಢೇಸುಗೂರು ಮತ್ತು ಸಾಲಗುಂದ ಗ್ರಾಪಂ ಕಚೇರಿಗಳ ಮುಂದೆ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಲಾಯಿತು.
ಎನ್‌ಎಂಎಂಎಸ್, ಇ-ಕೆವೈಸಿ ಅವೈಜ್ಞಾನಿಕ ತಂತ್ರಜ್ಞಾನ ಅಳವಡಿಸುವುದನ್ನು ಕೈಬಿಟ್ಟು ಸರಳ ರೀತಿಯಲ್ಲಿ ಕಾರ್ಮಿಕರ ಹಾಜರಾತಿ ನಿರ್ವಹಿಸಬೇಕು. ರಾಜ್ಯ ಸರ್ಕಾರ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಒಪ್ಪದಿರುವುದರಿಂದ ಮನರೇಗಾ ಅಡಿಯಲ್ಲಿ 100 ದಿನದ ಕೆಲಸವನ್ನು ಕೊಡಲು ನಮೂನೆ-6 ಪಡೆದು ಉದ್ಯೋಗ ಕಲ್ಪಿಸಬೇಕು.
ವಿಪರೀತ ಬೇಸಿಗೆ ಇರುವುದರಿಂದ ಬೆಳಗ್ಗೆ 7 ರಿಂದ 11 ಗಂಟೆಯೊಳಗೆ ಕೆಲಸ ಒದಗಿಸಬೇಕು. ಕೆಲಸದ ಸಂದರ್ಭದಲ್ಲಿ ಬಿಸಿಲಿನಿಂದ ಮೃತಪಟ್ಟ ಕೂಲಿಕಾರರಿಗೆ ತಲಾ 10 ಲಕ ್ಷರೂ. ಪರಿಹಾರ ನೀಡಬೇಕು. ಕೃಷಿ ಕೆಲಸಗಳು ಸಂಪೂರ್ಣ ಯಂತ್ರಮಯವಾಗಿದ್ದು, ಕೆಲಸವಿಲ್ಲದೆ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಆದ್ದರಿಂದ ವರ್ಷದಲ್ಲಿ 200 ದಿನ ಕೆಲಸ ಕೊಡಬೇಕು. ದಿನ ಬಳಕೆ ವಸ್ತುಗಳ ಬೆಲೆಗಳು ತೀವ್ರ ಹೆಚ್ಚಿರುವುದರಿಂದ 600 ರೂ. ಕೂಲಿ ಘೋಷಿಸಿ, ಎಲ್ಲ ಕೆಲಸಗಳಿಗೂ ಜಾರಿಗೊಳಿಸಬೇಕು. ಮೇಟಿ ಕಾರ್ಡ್‌ಗಳನ್ನು ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಂಘದ ತಾಲೂಕು ಘಟಕದ ಕಾರ್ಯದರ್ಶಿ ಅಪ್ಪಣ್ಣ ಕಾಂಬಳೆ, ವಿರುಪಾಪುರ ಗ್ರಾಮ ಘಟಕದ ಕರಿಯಮ್ಮ, ಪ್ರಮುಖರಾದ ಶರಣಪ್ಪ, ಉಮೇಶ, ಹನುಮಂತ, ಸತ್ಯಪ್ಪ, ಮಾರುತಿ, ಸಣ್ಣ ಆನಂದ, ದೇವಕಮ್ಮ, ತಾಯಮ್ಮ, ವಿರುಪಮ್ಮ, ಗಂಗಮ್ಮ, ದುರುಗಪ್ಪ, ಕೆಂಗಲ್ ಗ್ರಾಮ ಘಟಕದ ಶಂಕ್ರಪ್ಪ್ಪ, ಹುಸೇನಪ ದಢೇಸುಗೂರು, ಮೌಲಪ್ಪ ಕೆಂಗಲ್, ಹಂಪಮ್ಮ, ರೇಣುಕಮ್ಮ, ಲಕ್ಷ್ಮಮ್ಮ, ಗಂಗಮ್ಮ, ರಾಮಮ್ಮ, ಶಾಂತಮ್ಮ, ಸಿದ್ದಪ್ಪ, ಮೌನೇಶ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net