ಬಾಕಿ ಉಳಿಸಿಕೊಂಡ ವೇತನ ಪಾವತಿಸಿ

ಮಾನ್ವಿಯ ತಾಪಂ ಕಚೇರಿ ಅವರಣದಲ್ಲಿ ಮಂಗಳವಾರ ಸಿಐಟಿಯು ನೇತೃತ್ವದಲ್ಲಿ ಗ್ರಾಪಂ ನೌಕರರು ಪ್ರತಿಭಟನೆ ನಡೆಸಿದರು.  ಪ್ರಮುಖರಾದ ಶರ್ಫುದ್ದೀನ್ ಪೋತ್ನಾಳ, ಅಂಬಣ್ಣ ನಾಯಕ, ಪ್ರವೀಣಕುಮಾರ, ಚಕ್ರಪಾಣಿ, ವೆಂಕೋಬ ನಾಯಕ ಇತರರಿದ್ದರು.
ಮಾನ್ವಿಯ ತಾಪಂ ಕಚೇರಿ ಅವರಣದಲ್ಲಿ ಮಂಗಳವಾರ ಸಿಐಟಿಯು ನೇತೃತ್ವದಲ್ಲಿ ಗ್ರಾಪಂ ನೌಕರರು ಪ್ರತಿಭಟನೆ ನಡೆಸಿದರು. ಪ್ರಮುಖರಾದ ಶರ್ಫುದ್ದೀನ್ ಪೋತ್ನಾಳ, ಅಂಬಣ್ಣ ನಾಯಕ, ಪ್ರವೀಣಕುಮಾರ, ಚಕ್ರಪಾಣಿ, ವೆಂಕೋಬ ನಾಯಕ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾನ್ವಿಯಲ್ಲಿ ಸಿಐಟಿಯು ನೇತೃತ್ವದಲ್ಲಿ ಗ್ರಾಪಂ ನೌಕರರ ಪ್ರತಿಭಟನೆ
ಬಾಕಿ ಉಳಿಸಿಕೊಂಡ ವೇತನ ಪಾವತಿಸಿ Pay the outstanding salary
* ಮಾನ್ವಿಯಲ್ಲಿ ಸಿಐಟಿಯು ನೇತೃತ್ವದಲ್ಲಿ ಗ್ರಾಪಂ ನೌಕರರ ಪ್ರತಿಭಟನೆ
ಮಾನ್ವಿ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ತಾಪಂ ಅವರಣದಲ್ಲಿ ಮಂಗಳವಾರ ಸಿಐಟಿಯು ನೇತೃತ್ವದಲ್ಲಿ ಗ್ರಾಪಂ ನೌಕರರು ಪ್ರತಿಭಟನೆ ನಡೆಸಿದರು. 
ಗ್ರಾಮ ಪಂಚಾಯತಿ ನೌಕರರ ಬೇಡಿಕೆಗಳನ್ನು ಈಡೇರಿಸದಿದ್ದರೆ ತಾಪಂ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಮಾಡುವುದಾಗಿ ಇಒ ಮನವಿ ಸಲ್ಲಿಸಲಾಗಿತ್ತು. ಆದರೆ, ಸೂಕ್ತ ಕ್ರಮ ವಹಿಸುವಂತೆ ಪಿಡಿಒಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು
ಸರ್ಕಾರದ ಆದೇಶದಂತೆ ಪ್ರತಿ ತಿಂಗಳು 5ನೇ ತಾರೀಖಿನೊಳಗೆ ವೇತನ ಪಾವತಿಸಬೇಕು. ಸರ್ಕಾರದ ಆದೇಶದನ್ವಯ ಸೇವಾ ಅವಧಿಯಲ್ಲಿ ಮರಣ ಹೊಂದಿದ ನೌಕರನ ಕುಟುಂಬಸ್ಥರಲ್ಲಿ ಒಬ್ಬರಿಗೆ ಕೆಲಸ ನೀಡಬೇಕು. ಪಂಚಾಯತಿಗಳ ಸಿಬ್ಬಂದಿಗೆ ಜೀವವಿಮೆ ಮಾಡಿಸಬೇಕು. 
ನಿವೃತ್ತ ನೌಕರರಿಗೆ ಉಪಧನ ನೀಡಬೇಕು. ಈವರೆಗೂ ಬಾಕಿ ಉಳಿಸಿಕೊಂಡ ವೇತನ ಪಾವತಿಸಬೇಕು. ಪ್ರತಿ ನಿತ್ಯ ಧ್ವಜಾರೋಹಣ ಮಾಡುತ್ತಿರುವ ಸಿಬ್ಬಂದಿಗೆ ಸರಿಯಾಗಿ ವೇತನ ಮಾಡಬೇಕು. ಯಾವುದೇ ದೂರುಗಳಿದ್ದರೂ ಕಾನೂನಾತ್ಮಕವಾಗಿ ವಿಚಾರಣೆ ನಡೆಸಬೇಕು. ಆದರೆ, ವೇತನ ತಡೆಹಿಡಿಯದಂತೆ ಪಿಡಿಒಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ತಾಲೂಕು ಅಧ್ಯಕ್ಷ ಶರ್ಫುದ್ದೀನ್ ಪೋತ್ನಾಳ, ಗ್ರಾಪಂ ನೌಕರರ ಸಂಘದ ತಾಲೂಕು ಅಧ್ಯಕ್ಷ ಅಂಬಣ್ಣ ನಾಯಕ, ಮಹ್ಮದ್ ನೀರಮಾನ್ವಿ, ಸುಭಾನ್, ಚಂದ್ರಶೇಖರ ಕಪಗಲ್, ಬಸವರಾಜ ನೀರಮಾನ್ವಿ, ಪ್ರವೀಣಕುಮಾರ, ಚಕ್ರಪಾಣಿ, ವೆಂಕೋಬ ನಾಯಕ, ಯೇಸುರಾಜ್, ಚಿಕ್ಕಯ್ಯ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net