ವಾರದೊಳಗೆ ಜೋಳ ಖರೀದಿ ಹಣ ಪಾವತಿಸಿ

ಅಮೀನ್‌ಪಾಷಾ ದಿದ್ದಗಿ
ಅಮೀನ್‌ಪಾಷಾ ದಿದ್ದಗಿ
Published on
ಸಿಂಧನೂರು: ಮುಂದಿನ ವಾರದೊಳಗೆ ಜೋಳ ಖರೀದಿ ಹಣ ಪಾವತಿಸಬೇಕು. ಹಿಂಗಾರು ಜೋಳ ಖರೀದಿಗೆ ಮುಂದಾಗಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಅಮೀನ್‌ಪಾಷಾ ದಿದ್ದಗಿ ಒತ್ತಾಯಿಸಿದರು. 
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ಮುಂಗಾರು ಜೋಳ ಖರೀದಿಸಿ ತಿಂಗಳು ಕಳೆದರೂ ರೈತರ ಖಾತೆಗೆ ಹಣ ಬಂದಿಲ್ಲ. ಖರೀದಿ ಸಂದರ್ಭದಲ್ಲಿ ಕೂಡ ಸಾಕಷ್ಟು ಗೊಂದಲಗಳನ್ನು ಮಾಡಲಾಗಿದೆ. ಜತೆಗೆ ಅರ್ಹ 5500 ರೈತರ ಎಫ್‌ಐಡಿ ಕೂಡ ಲಾಕ್ ಮಾಡಲಾಗಿದೆ. ಜೋಳ ಬೆಳೆದ ರೈತರಿಗೆ ಸರಿಯಾದ ನ್ಯಾಯ ನೀಡಲು ಸರ್ಕಾರ ಮುಂದಾಗುತ್ತಿಲ್ಲ ಎಂದು ದೂರಿದರು. 
ಈಗಾಗಲೇ ತುಂಗಭದ್ರಾ ಜಲಾಶಯಕ್ಕೆ ಕ್ರಸ್ಟ್‌ಗೇಟ್ ಅಳವಡಿಸಿರುವುದು ಸ್ವಾಗತಾರ್ಹ. ಆದರೆ, ಉಪಕಾಲುವೆ ದುರಸ್ತಿಗೆ ಮುಂದಾಗಿಲ್ಲ. ಇದರಿಂದ ರೈತರು ಉಪಕಾಲುವೆಗಳಿಂದ ಸಮರ್ಪಕವಾಗಿ ನೀರು ಪಡೆಯಲು ಕಷ್ಟ. ನಾಲೆ ದುರಸ್ತಿ ಕಾರ್ಯ ಆರಂಭಿಸಬೇಕು. ಹಿಂಗಾರು ಜೋಳ ಖರೀದಿಗೆ ಅಗತ್ಯ ಕ್ರಮಕೈಗೊಳ್ಳಬೇಕು. ರೈತರಿಗೆ ಕನಿಷ್ಠ ಎಕರೆಗೆ 4 ಚೀಲ ರಸಗೊಬ್ಬರ ವಿತರಿಸಬೇಕೆಂದು ಆಗ್ರಹಿಸಿದರು. ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಹಂಚಿನಾಳ, ಅಣ್ಣಪ್ಪ ಜಾಲಿಹಾಳ, ಯುಸೂಫ್, ಬಸಣ್ಣ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net