ತಾಲೂಕಿನ 33 ಗ್ರಾಪಂಗಳಲ್ಲಿ ಹಲವು ವರ್ಷಗಳಿಂದ ನೌಕರರು ದುಡಿಯುತ್ತಿದ್ದು, ತಿಂಗಳಿಗೆ ಸರಿಯಾಗಿ ವೇತನ ನೀಡದೆ ಉಳಿಸಿಕೊಳ್ಳಲಾಗಿದೆ. ಬಿಲ್ ಕಲೆಕ್ಟರ್‌ಗಳು, ನೀರುಗಂಟಿಗಳು, ಕಸ ಗುಡಿಸುವವರು, ವಿವಿಧ ಸಿಬ್ಬಂದಿ ಬೆಳಗ್ಗೆಯಿಂದ ಸಂಜೆವರೆಗೆ ದುಡಿಯುತ್ತಾರೆ. ಸ್ವಚ್ಛತಾ ಕೆಲಸ, ನೀರು ಬಿಡುವುದು, ಕಸ ಗುಡಿಸುವುದು, ಅಧಿಕಾರಿಗಳ ಸೂಚನೆ ಮೇರೆಗೆ ತೆರಿಗೆ ಸಂಗ್ರಹ ಮಾಡುವುದು ಸೇರಿದಂತೆ ಇತರ ಕೆಲಸ ಮಾಡುತ್ತಿದ್ದೇವೆ. ಆದರೆ ಸರಿಯಾದ ಸಮಯಕ್ಕೆ ವೇತನ ನೀಡದ ಕಾರಣ ಜೀವನ ನಡೆಸುವುದು ಕಷ್ಟವಾಗಿದೆ ಎಂದು ಸಂಘಟನೆ ಸದಸ್ಯರು ದೂರಿದರು.