ತಾಳ್ಮೆ ಇದ್ದರೆ ಅಧಿಕಾರ ದೊರೆಯುತ್ತದೆ

ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಜಯ ಧರ್ಮಸಿಂಗ್
ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಜಯ ಧರ್ಮಸಿಂಗ್
Published on

ಸಚಿವ ಸಂಪುಟದಲ್ಲಿ ಹಲವು ಶಾಸಕರು ಅಸಮಾಧಾನವಾಗಿರುವುದು ಕೇವಲ ನಮ್ಮ ರಾಜ್ಯ, ಕಾಂಗ್ರೆಸ್ ಪಕ್ಷದಲ್ಲಿ ಮಾತ್ರವಲ್ಲದೆ ದೇಶದ ಎಲ್ಲ ರಾಜ್ಯದಲ್ಲಿ ಸಮಸ್ಯೆಯಿದೆ ತಾಳ್ಮೆಯಿಂದ ಇದ್ದರೆ ಅಧಿಕಾರ ದೊರೆಯುತ್ತದೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಜಯ ಧರ್ಮಸಿಂಗ್ ಹೇಳಿದರು.

ತಾಲೂಕಿನ ಹುಣಿಸಿಹಾಳ ಹುಡಾ ಗ್ರಾಮದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ತಂದೆಯ ಕಾಲದಿಂದಲು ಹಿರಿಯ ಹಾಗೂ ಕಿರಿಯ ಶಾಸಕರಿಗೆ ಸಚಿವ ಸ್ಥಾನದ ಅಸಮಾಧಾನತೆ ಇದೆ. ಇಂದು ಅನೇಕ ಹಿರಿಯ ಶಾಸಕರು ಸಚಿವ ಸ್ಥಾನಕ್ಕೆ ಅರ್ಹರಿದ್ದಾರೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು ಕೆಲ ಹಿರಿಯ,ಯುವಕರಿಗೆ ಸಚಿವ ಸ್ಥಾನ ನೀಡಿ ಅನುಕೂಲ ಮಾಡಿಕೊಟ್ಟಿದ್ದು, ಹಿರಿಯರಿಗೆ ತಾಳ್ಮೆಯಿಂದ ಇರಲು ಹೇಳಿದ್ದಾರೆ. ಸಿಎಂ ಆವರು ಕೂಡ 2004 ಹಾಗೂ 2014 ರಲ್ಲಿ ಮಂತ್ರಿ ಆಗಿರಲಿಲ್ಲ.
ನಾವು ಅವರನ್ನು ಡಿಸಿಎಂ ಜಿ.ಪರಮೇಶ್ವರ ಅವರನ್ನು ನೋಡಿಕೊಂಡು ಮುಂದುವರೆಯಬೇಕು. ನಾನು 2018 ಮತ್ತು 2023 ಕೂಡ ಸಚಿವ ಸ್ಥಾನದಿಂದ ವಂಚಿತನಾಗಿದ್ದೆ. ಇವಗ ದೊರೆತ್ತಿದೆ ಅಭಿವೃದ್ದಿ ಕಡೆಗೆ ಗಮನ ನೀಡಬೇಕು. ಈಗಾಗಲೇ ಸಚಿವ ಸ್ಥಾನ ವಂಚಿತ ಶಾಸಕರ ಅಸಮಾಧಾನ ಶಮನವಾಗುತ್ತಿದ್ದು, ರಾಜಿನಾಮೆ ಕೊಟ್ಟಿದ್ದ ಶಾಸಕರು ವಾಪಸ್ ತಗೊಂಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪೂವಿತಾ ಎಸ್. ಶಾಸಕ ಬಸನಗೌಡ ದದ್ದಲ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net