ಗ್ಯಾರಂಟಿ ಯೋಜನೆಗಳಿಗಾಗಿ ಮತದಾರ ಪರಿಷ್ಕರಣೆ ಭಾಗವಹಿಸಿ- ಮಾಜಿ ಸಚಿವ

 ರಾಯಚೂರಿನ ಹರಬ್ ಮೊಹಲ್ಲಾ ಬಡಾವಣೆಯಲ್ಲಿ ಶುಕ್ರವಾರ ಮಾಜಿ ಸಚಿವ ಎನ್.ಎಸ್.ಬೋಸರಾಜು ವಿಶೇಷ ಮತದಾರರ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯಕ್ರಮದ ಜಾಗೃತಿ ಮೂಡಿಸಿದರು. ಸಂಸದ ಜಿ.ಕುಮಾರ ನಾಯಕ, ಕಾಂಗ್ರೆಸ್ ಮುಖಂಡರಾದ ಜಯಣ್ಣ, ಕೆ ಶಾಂತಪ್ಪ, ಮೊಹ್ಮದ್ ಶಾಲಂ, ಜಯವಂತರಾವ್ ಪತಂಗೆ, ಯುಸೂಫ ಖಾನ್, ಜಿಂದಪ್ಪ, ದೇವರಾಜ್, ತಿಮ್ಮಪ್ಪ  ಇದ್ದರು.
ರಾಯಚೂರಿನ ಹರಬ್ ಮೊಹಲ್ಲಾ ಬಡಾವಣೆಯಲ್ಲಿ ಶುಕ್ರವಾರ ಮಾಜಿ ಸಚಿವ ಎನ್.ಎಸ್.ಬೋಸರಾಜು ವಿಶೇಷ ಮತದಾರರ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯಕ್ರಮದ ಜಾಗೃತಿ ಮೂಡಿಸಿದರು. ಸಂಸದ ಜಿ.ಕುಮಾರ ನಾಯಕ, ಕಾಂಗ್ರೆಸ್ ಮುಖಂಡರಾದ ಜಯಣ್ಣ, ಕೆ ಶಾಂತಪ್ಪ, ಮೊಹ್ಮದ್ ಶಾಲಂ, ಜಯವಂತರಾವ್ ಪತಂಗೆ, ಯುಸೂಫ ಖಾನ್, ಜಿಂದಪ್ಪ, ದೇವರಾಜ್, ತಿಮ್ಮಪ್ಪ ಇದ್ದರು.
Published on
ರಾಯಚೂರು ಪ್ರಜಾಪ್ರಭುತ್ವ ವ್ಯವಸ್ತೆಯಲ್ಲಿ ಮತದಾನ ದೇಶದ ಭವಿಷ್ಯ ನಿರ್ಧರಿಸುವ ಪವಿತ್ರ ಕರ್ತವ್ಯವಾಗಿದೆ. ಜಿಲ್ಲೆಯ ಎಲ್ಲ ಅರ್ಹ ಮತದಾರರು ತಮ್ಮ ತಮ್ಮ ಹೆಸರನ್ನು ಈ ಪರಿಷ್ಕರಣೆಯ ಮತದಾರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಬೇಕು ಇಲ್ಲದಿದ್ದರೆ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲವೆಂದು ಮಾಜಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ನಗರದ ಹರಬ್ ಮೊಹಲ್ಲಾ, ಸಿಯಾತಲಾಬ್ ಸೇರಿದಂತೆ ವಿವಿಧ ಬಡಾವಣೆಗಳಿಗೆ ವಿಶೇಷ ಮತದಾರರ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯಕ್ರಮದ ಜಾಗೃತಿ ಮೂಡಿಸಿ ಮಾತನಾಡಿದರು. ನಾನು ಈ ಮತದಾರ ಪರಿಷ್ಕರಣೆಯಲ್ಲಿ ಭಾಗವಹಿಸಿ, ನನ್ನ ಎಲ್ಲಾ ವಿವರಗಳೊಂದಿಗೆ ಫಾರಂ ಬರ್ತಿ ಮಾಡಿ ಸ್ವವಿವರ ನೀಡಿದ್ದೇನೆ. ಯಾರೂ ಸಹ ಈ ಪ್ರಕ್ರಿಯೆಯಿಂದ ದೂರ ಸರಿಯಬಾರದು. ಅರ್ಹರಿಗೆ ಗ್ಯಾರಂಟಿ ಯೋಜನೆಗಳು ತಲುಪಲು ಈ ಮತದಾರ ಪರಿಷ್ಕರಣೆ ಅಗತ್ಯವಾಗಿದೆ ಎಂದರು.
ಪ್ರತಿಯೊಬ್ಬ ಅರ್ಹ ನಾಗರಿಕನ ಹೆಸರು ಮತದಾರರ ಪಟ್ಟಿಯಲ್ಲಿ ಸರಿಯಾಗಿ ದಾಖಲಿಸಬೇಕು. ಮತದಾರರ ಹೆಸರು ಸೇರ್ಪಡೆ, ವಿಳಾಸ ಬದಲಾವಣೆ, ತಿದ್ದುಪಡಿ, ವಯಸ್ಸು ಮತ್ತು ಗುರುತಿನ ವಿವರಗಳ ಪರಿಶೀಲನೆ ಸೇರಿದಂತೆ ಎಲ್ಲ ಮಾಹಿತಿಯೂ ಸರಿಯಾಗಿ ನೀಡಬೇಕು. ಅಗತ್ಯ ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವುದು, ಬೂತ್ ಮಟ್ಟದ ಅಧಿಕಾರಿಗಳೊಂದಿಗೆ ಸಹಕರಿಸುವುದು ಮತ್ತು ಯಾವುದೇ ತಪ್ಪು ಮಾಹಿತಿ ಕಂಡುಬಂದರೆ ತಕ್ಷಣ ಸರಿಪಡಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ ಈ ಪ್ರಕ್ತಿಯಲ್ಲಿ ಬಿಎಲ್ ಓ ಹಾಗೂ ಬಿಎಲ್ ಎ - 2 ಗಳ ಸಮನ್ವಯತೆ ಮುಖ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸದ ಜಿ.ಕುಮಾರ ನಾಯಕ, ಕಾಂಗ್ರೆಸ್ ಮುಖಂಡರಾದ ಜಯಣ್ಣ, ಕೆ ಶಾಂತಪ್ಪ, ಮೊಹ್ಮದ್ ಶಾಲಂ, ಜಯವಂತರಾವ್ ಪತಂಗೆ, ಯುಸೂಫ ಖಾನ್, ಜಿಂದಪ್ಪ, ದೇವರಾಜ್, ತಿಮ್ಮಪ್ಪ , ಬೂತ್ ಮಟ್ಟದ ಏಜೆಂಟ್‌ಗಳು ಹಾಗೂ ಸಾರ್ವಜನಿಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net