ಆರೋಗ್ಯಕರ ಚಟುವಟಿಕೆಗಳಲ್ಲಿ ಭಾಗವಹಿಸಿ

ಲಿಂಗಸುಗೂರು ತಾಲೂಕು ಕ್ರೀಡಾಂಗಣದಲ್ಲಿ ಜಿಪಿಎಲ್ ಸೀಸನ್-2 ಕ್ರಿಕೆಟ್ ಪಂದ್ಯಾವಳಿಗೆ ಪುರಸಭೆ ಮಾಜಿ ಸದಸ್ಯ ಬಾಬಾಖಾಜಿ ಚಾಲನೆ ನೀಡಿದರು. ಪ್ರಮುಖರಾದ ಚೌದ್ರಿಸಾಬ್, ನೂರ್‌ಸಾಬ್, ಹಸನ್‌ಸಾಬ್, ಅಹ್ಮದ್, ಶಿವು, ಶಾಮೀದ್ ಇತರರಿದ್ದರು.
ಲಿಂಗಸುಗೂರು ತಾಲೂಕು ಕ್ರೀಡಾಂಗಣದಲ್ಲಿ ಜಿಪಿಎಲ್ ಸೀಸನ್-2 ಕ್ರಿಕೆಟ್ ಪಂದ್ಯಾವಳಿಗೆ ಪುರಸಭೆ ಮಾಜಿ ಸದಸ್ಯ ಬಾಬಾಖಾಜಿ ಚಾಲನೆ ನೀಡಿದರು. ಪ್ರಮುಖರಾದ ಚೌದ್ರಿಸಾಬ್, ನೂರ್‌ಸಾಬ್, ಹಸನ್‌ಸಾಬ್, ಅಹ್ಮದ್, ಶಿವು, ಶಾಮೀದ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಚಟುವಟಿಕೆ

ಆರೋಗ್ಯಕರ ಚಟುವಟಿಕೆಗಳಲ್ಲಿ ಭಾಗವಹಿಸಿ

ಲಿಂಗಸುಗೂರು: ಕ್ರಿಕೆಟ್ ಎಲ್ಲರನ್ನೂ ಒಂದೆಡೆ ಸೇರಿಸುವ ಆಟವಾಗಿದ್ದು, ಇದರಿಂದ ಸ್ನೇಹ, ಸಾಮರಸ್ಯ ವೃದ್ಧಿಸುತ್ತದೆ ಎಂದು ಪುರಸಭೆ ಮಾಜಿ ಸದಸ್ಯ ಬಾಬಾಖಾಜಿ ಎಂದು ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಗೌಳಿಪೂರ ಕ್ರಿಕೆಟ್ ಅಭಿಮಾನಿಗಳಿಂದ ಭಾನುವಾರ ಆಯೋಜಿಸಿದ್ದ ಜಿಪಿಎಲ್ ಸೀಸನ್-2 ಕ್ರಿಕೆಟ್ ಟೂರ್ನಮೆಂಟ್‌ಗೆ ಚಾಲನೆ ನೀಡಿ ಮಾತನಾಡಿದರು. ಆಟಗಾರರು ಭೇದ ಭಾವ ಮರೆತು ಪಾಲ್ಗೊಳ್ಳಬೇಕು.
ಯುವಕರು ಆರೋಗ್ಯಕರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು. ನಾಗರಾಜ ಕಾನಿಹಾಳ ಪ್ರಥಮ, ಮದರಸಾಬ್ ದ್ವಿತೀಯ, ತಿಪ್ಪೇಶ ದೋಟಿಹಾಳ ತೃತೀಯ ಬಹುಮಾನದ ಪ್ರಾಯೋಜಕರಾಗಿದ್ದಾರೆ. 6 ತಂಡಗಳು ಭಾಗವಹಿಸಿದ್ದು 4 ದಿನಗಳು ಪಂದ್ಯಾವಳಿ ನಡೆಯಲಿದೆ.
ಪ್ರಮುಖರಾದ ಚೌದ್ರಿಸಾಬ್, ನೂರ್‌ಸಾಬ್, ಹಸನ್‌ಸಾಬ್, ಅಹ್ಮದ್, ಯಾಕೂಬ್ ಪಾಷಾ, ಶಿವು, ಮೆಹಬೂಬ್, ಭಕ್ಷು, ಅಜ್ಮೀರ್, ಸದ್ದಾಂ, ಮೋದಿನಸಾಬ್, ರಮೇಶ, ಹಜರತ್‌ಅಲಿ, ಶಾಮೀದ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net