ಎಂ.ರಾಮಲದಿನ್ನಿ ಸರ್ಕಾರಿ ಶಾಲೆಗೆ ಮಾನ್ವಿ ಬಿಇಒ ಚಂದ್ರಶೇಖರ ದೊಡ್ಡಮನಿ ಮಂಗಳವಾರ ಭೇಟಿ ನೀಡಿದ ವೇಳೆ ಮಸ್ಕಿ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ ಕವಿ, ಪ್ರಮುಖರಾದ ಸಣ್ಣ ಯಂಕಪ್ಪ, ಅಯ್ಯಪ್ಪ, ಅಂಬಣ್ಣ, ಸಿದ್ದಪ್ಪ ಇತರರಿದ್ದರು.
Published on:
Copied
Follow Us
ಕವಿತಾಳ:ಬಿಸಿಯೂಟ ಉದ್ಯೋಗಿ ಹಾಗೂ ಗ್ರಾಮಸ್ಥರ ನಡುವೆ ನಡೆದ ಜಗಳಕ್ಕೆ ಸಂಬಂಧಿಸಿ ಹಾಲಾಪುರ ಗ್ರಾಪಂ ವ್ಯಾಪ್ತಿಯ ಎಂ.ರಾಮಲದಿನ್ನಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ಮಾನ್ವಿ ಬಿಇಒ ಚಂದ್ರಶೇಖರ ದೊಡ್ಡಮನಿ ಭೇಟಿ ನೀಡಿ ಸಭೆ ನಡೆಸಿದರು.
ಬಿಇಒ ಮಾತನಾಡಿ, ಬಿಸಿಯೂಟ ವಿಚಾರ ಗೊಂದಲ ಮರೆತು ಮಕ್ಕಳ ಶಿಕ್ಷಣ ಸಲುವಾಗಿ ಶಾಲೆಗೆ ಕಳಿಸಬೇಕು ಎಂದು ಕೋರಿದರು. ಆದರೆ, ಗ್ರಾಮಸ್ಥರು ಇದಕ್ಕೆ ಒಪ್ಪದ ಗ್ರಾಮಸ್ಥರು, ಬಿಸಿಯೂಟ ತಯಾರಿಸುವ ಶಂಕ್ರಮ್ಮ ಇದ್ದರೆ ನಮ್ಮ ಮಕ್ಕಳನ್ನು ಶಾಲೆಗೆ ಕಳಿಸಲ್ಲ ಎಂದರು.
ಈ ವೇಳೆ ಬಿಸಿಯೂಟ ಉದ್ಯೋಗಿಯನ್ನು ಹಾಲಾಪುರ ಶಾಲೆಗೆ ಹೋಗಲು ಬಿಇಒ ಕೇಳಿದರು. ಅದಕ್ಕೆ ಶಂಕ್ರಮ್ಮ, ನಾನು ಏನು ತಪ್ಪು ಮಾಡಿಲ್ಲ, ನಾನೇಕೆ ಹಾಲಾಪುರಕ್ಕೆ ಹೋಗ್ಬೇಕು. ನಾನು ಇಲ್ಲಿಯೇ ಕೆಲಸ ಮಾಡ್ತೀನಿ ಎಂದು ಪಟ್ಟು ಹಿಡಿದರು. ಕೊನೆಗೆ ಬಿಇಒ ಅವರು ಡಿಡಿಪಿಐಗೆ ಕರೆ ಮಾಡಿ ಮಾಹಿತಿ ನೀಡಿದರು.
ಅವರ ಆದೇಶದಂತೆ ಹಾಲಾಪುರ ಸರ್ಕಾರಿ ಪ್ರೌಢಶಾಲೆಯಿಂದ ಬಿಸಿಯೂಟ ತರಿಸಿ ಮಕ್ಕಳಿಗೆ ನೀಡಲಾಗುವುದು ಎಂದು ತಿಳಿಸಿದರು. ಇದಕ್ಕೆ ಒಪ್ಪಿ ಮಕ್ಕಳನ್ನು ಶಾಲೆಗೆ ಕಳಿಸುವುದಾಗಿ ತಿಳಿಸಿದ ಪಾಲಕರು, ಮತ್ತೆ ಏನಾದರೂ ನಮಗೆ ಬೇಡವಾದ ಅವರಿಂದ ಅಡುಗೆ ಮಾಡಿಸಿದರೆ ಮಕ್ಕಳನ್ನು ಕಳಿಸಲ್ಲ ಎಂದು ಎಚ್ಚರಿಸಿದರು.
ಬಿಇಒ ಕಚೇರಿ ಉದ್ಯೋಗಿ ಮಹೇಶ, ಶಿಕ್ಷಕರ ಸಂಘದ ಮಸ್ಕಿ ತಾಲೂಕು ಅಧ್ಯಕ್ಷ ಮಂಜುನಾಥ ಕವಿ, ಪ್ರಮುಖರಾದ ಸಣ್ಣ ಯಂಕಪ್ಪ, ಅಯ್ಯಪ್ಪ, ಅಂಬಣ್ಣ, ಸಿದ್ದಪ್ಪ ಇತರರಿದ್ದರು.