ಸಾಧು ವೇಷದಲ್ಲಿ ಪಂಗನಾಮ

ಸಿಂಧನೂರಿನಲ್ಲಿ ಸಾಧು ವೇಷ ತೊಟ್ಟಿರುವ ಖದೀಮ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವುದು.
ಸಿಂಧನೂರಿನಲ್ಲಿ ಸಾಧು ವೇಷ ತೊಟ್ಟಿರುವ ಖದೀಮ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಚಿನ್ನ, ನಗದು ದೋಚಿದ ಖದೀಮ
  • ಸಿಂಧನೂರು ಭಿಕ್ಷೆ ನೆಪದಲ್ಲಿ ಹಣ ದೋಚುವ ಪ್ರಕರಣ
ಸಿಂಧನೂರು: ಕಳೆದ ಕೆಲ ದಿನಗಳಿಂದ ನಗರದಮೆಡಿಕಲ್ ಸ್ಟೋರ್ ಸೇರಿದಂತೆ ವಿವಿಧ ಅಂಗಡಿಗಳಲ್ಲಿ ಸಾಧು ವೇಷ ತೊಟ್ಟ ಖದೀಮರು ಭಿಕ್ಷೆ ಬೇಡುವ ನೆಪದಲ್ಲಿ ಹಣ ದೋಚುವ ಪ್ರಕರಣಗಳು ಬೆಳಕಿಗೆ ಬಂದಿವೆ.
ವಿವಿಧ ಅಂಗಡಿಗಳಲ್ಲಿ ಜನ ಸಂದಣಿ ಇಲ್ಲದಿರುವುದನ್ನು ಗಮನಿಸಿ, ಅಲ್ಲಿಗೆ ತೆರಳಿ ಭಿಕ್ಷೆ ಬೇಡಿದಂತೆ ಮಾಡಿ, ಮಾಲೀಕರು ಹಣದ ಗಲ್ಲಿ ಪೆಟ್ಟಿಗೆಗೆ ಕೈ ಹಾಕುತ್ತಿದ್ದಂತೆ ಮಂಕೂಬೂದಿ ಎರಚಿ ಹಣ, ಬಂಗಾರ, ವಸ್ತು ದೋಚುತ್ತಿದ್ದಾರೆ.
ಮೊನ್ನೆಯಷ್ಟೇ (ಬುಧವಾರ) ನಗರದ ಕುಷ್ಟಗಿ ರಸ್ತೆಯ ಕೂಡಲಸಂಗಮ ಸಿನಿಮಾ ಮಂದಿರ ಎದುರಿನ ಶ್ರೀ ಸಾಯಿ ಮೆಡಿಕಲ್ ಮತ್ತು ಜನರಲ್ ಸ್ಟೋರ್‌ಗೆ ಬೆಳಗ್ಗೆ 10 ಗಂಟೆ ಹೊತ್ತಿಗೆ ಸಾಧು ವೇಷಧಾರಿ ಓರ್ವ ಬಂದಿದ್ದ. ತಮ್ಮ ಮೆಡಿಕಲ್ ಮುಂಭಾಗಲ್ಲಿ ಇಟ್ಟಿದ್ದ ಕ್ಯಾನ್‌ನಿಂದ ನೀರು ಕುಡಿಯುವುದನ್ನು ಗಮನಿಸಿದ ಮಾಲೀಕ ವಿಷ್ಣುದತ್ತ ಅನುಕಂಪ ತೋರಿಸಿ, ಫ್ರಿಡ್ಜ್‌ನಿಂದ ನೀರಿನ ಬಾಟಲ್ ತೆಗೆದು ಕುಡಿಯಲು ಕೊಟ್ಟಿದ್ದಾರೆ.
ಕೊಟ್ಟ ನೀರನ್ನು ಕುಡಿದು ನಿನಗೆ ಒಳ್ಳೆಯದಾಗಲಿ ಎಂದು ಅವರ ಕುಟುಂಬದ ಬಗ್ಗೆ ಚರ್ಚಿಸುತ್ತ ಎರಡು ಹೂವುಗಳನ್ನು ಕೊಟ್ಟಿದ್ದಾನೆ. ಹೂವಿನಿಂದ ಬಂದ ವಾಸನೆಯಿಂದ ಮೆಡಿಕಲ್ ಮಾಲೀಕ ವಿಷ್ಣುದತ್ತಗೆ ಮಂಕು ಬಡಿದು ಸಾಧು ವೇಷಧಾರಿಗೆ ಅರ್ಧ ತೊಲೆಯ ಉಂಗುರ, 10,500ರೂ. ಹಣ ಕೊಟ್ಟು ಕಳುಹಿಸಿದ್ದಾರೆ. ಈ ಬಗ್ಗೆ ಕೆಲಹೊತ್ತಿನ ಬಳಿಕ ಕೇಳಿದರೆ ಇದ್ಯಾವುದು ನನಗೆ ಅರವಿಲ್ಲ ಎನ್ನುತ್ತಾರೆ ವಿಷ್ಣುದತ್ತ. ಈ ಘಟನೆಯಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಆಗಾಗ ನಡೆಯುತ್ತಿರುವ ಇಂಥ ಘಟನೆಗಳಿಗೆ ಪೊಲೀಸರು ಬ್ರೇಕ್ ಹಾಕಲು ನಾಗರಿಕರು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net