ಪ್ರಾದೇಶಿಕ ಅರಣ್ಯ ಇಲಾಖೆಯ ವಲಯ ಅಧಿಕಾರಿ ರಾಜೇಶ ನಾಯಕ ಮಾತನಾಡಿ, ಅರಣ್ಯ ನಾಶದಿಂದಾಗಿ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಇನ್ನಾದರೂ ಎಚ್ಚೆತ್ತುಕೊಂಡು ಅರಣ್ಯ ಸಂರಕ್ಷಣೆಗೆ ಎಲ್ಲರೂ ಕೈಜೋಡಿ ಸಲೇಬೇಕಾಗಿದೆ. ಮನುಷ್ಯನ ಸ್ವಾರ್ಥದಿಂದ ಪರಿಸರ ನಾಶವಾಗುತ್ತಿದೆ. ಅವಕಾಶ ಸಿಕ್ಕಾಗ ಪ್ರತಿಯೊಬ್ಬರೂ ಗಿಡನೆಟ್ಟು ಅದನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯವಾಗಬೇಕು. ಹಿಂದಿನ ಕಾಲದಲ್ಲಿ ಕೆರೆ, ಕಟ್ಟೆ, ಬಾವಿ ನೀರನ್ನು ಸೇವಿಸುತ್ತಿದ್ದೆವು. ಆದರೆ, ಇಂದಿನ ಕಲುಷಿತ ವಾತಾವರಣದಿಂದ ಕೆರೆ ಕಟ್ಟೆ ನೀರು ಮಲೀನಗೊಂಡಿದೆ. ಪ್ರಸ್ತುತ ಯಂತ್ರಗಳಿಂದ ಶುದ್ಧಿಕರಿಸಿದ ನೀರನ್ನು ಸೇವಿಸುವ ಮಟ್ಟಕ್ಕೆ ತಲುಪಿದ್ದೆವೆ. ದೇಶದಲ್ಲಿ ಅತಿ ಹೆಚ್ಚು ವಾಯುಮಾಲಿನ್ಯ ರಾಜಧಾನಿ ದಿಲ್ಲಿಯಲ್ಲಿ ಕಂಡು ಬರುತ್ತಿದ್ದು ಇದರಿಂದ ಶ್ವಾಸಕೋಶ, ಉಸಿರಾಟದ ತೊಂದರೆ, ಹೃದಯ ರೋಗ ಹಾಗೂ ಕ್ಯಾನ್ಸರ್ ನಂತಹ ಕಾಯಿಲೆಗಳಿಗೆ ಆಹಾರವಾಗುತ್ತಿದ್ದೇವೆ ಎಂದರು.