ಬ್ಯಾಂಕ್‌ಗಳಲ್ಲಿ ಬಡವರು, ಆದಿವಾಸಿಗಳು, ಶೋಷಿತ ಸಮುದಾಯಗಳಿಗೆ ಸಾಲ ನೀಡುವುದಿರಲಿ, ಠೇವಣಿಯಿಟ್ಟ ಹಣವನ್ನು ವಾಪಸ್ ನೀಡಲೂ ಸತಾಯಿಸಲಾಗುತ್ತಿದೆ. ಆದರೆ, ಸಾವಿರಾರು ಕೋಟಿ ರೂಪಾಯಿ ಹಣವನ್ನು ಉದ್ಯಮಿಗಳು, ಬಂಡವಾಳಶಾಹಿಗಳು ಹಾಗೂ ಹಣ ವಂಚಿಸುವವರಿಗೆ ನೀಡುವ ಮೂಲಕ ಆರ್ಥಿಕ ತಾರತಮ್ಯ ಎಣಿಸುತ್ತಿವೆ. ಒಡಿಶಾದ ಕಿಯೋಂಜಾರ್ ಜಿಲ್ಲೆಯ ಪಠಣಾ ತಾಲೂಕಿನ ದೈನಾಳಿ ಬುಡಕಟ್ಟು ಗ್ರಾಮದ ಅನಕ್ಷರಸ್ಥ ಜೀತು ಮುಂಡಾ ಅವರ ಪ್ರಕರಣವನ್ನು ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ನ್ಯಾಯಾಂಗ ತನಿಖೆಗೆ ಒಳಪಡಿಸಿ, ತಪ್ಪಿತಸ್ಥ ಬ್ಯಾಂಕ್ ಅಧಿಕಾರಿಗಳನ್ನು ವಜಾಗೊಳಿಸಬೇಕು. ನೈತಿಕ ಹೊಣೆಹೊತ್ತು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಕೂಡಲೇ ರಾಜೀನಾಮೆ ನೀಡಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.