ಕನ್ನಡ ಶಾಲೆಗಳ ವಿಲೀನಕ್ಕೆ ಆಕ್ರೋಶ

ದೇವದುರ್ಗ ಬಿಇಒ ಕಚೇರಿ ಮುಂದೆ ಎಐಡಿಎಸ್‌ಒ ಪ್ರತಿಭಟನೆ ನಡೆಸಿತು. ಜಿಲ್ಲಾಧ್ಯಕ್ಷ ಹಯ್ಯಳಪ್ಪ, ಉಪಾಧ್ಯಕ್ಷ ಚನ್ನಬಸವ ಜಾನೇಕಲ್, ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಸಂಘಟಕ ಮಲ್ಲನಗೌಡ, ಶರಣಪ್ಪ, ದುರ್ಗಣ್ಣ, ಶಿವಪ್ಪ, ಆಂಜನೇಯ, ಚನ್ನಪ್ಪ, ದುರ್ಗೇಶ್, ಶಂಕ್ರಪ್ಪ  ಇದ್ದರು.

Published on
ದೇವದುರ್ಗ: ಕೆಪಿಎಸ್ ಶಾಲೆಗಳ ಹೆಸರಿನಲ್ಲಿ ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಪಟ್ಟಣದ ಬಿಇಒ ಕಚೇರಿ ಮುಂದೆ ಎಐಡಿಎಸ್‌ಒ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಜೂನ್‌ನಿಂದಲೇ ಹೊಸ ಕೆಪಿಎಸ್ ಶಾಲೆಗಳನ್ನು ಆರಂಭಿಸಲು ಸರ್ಕಾರ ಮುಂದಾಗಿದೆ. ಈ ಶಾಲೆಗಳಿಗೆ 3ರಿಂದ 5 ಕಿಮೀ ವ್ಯಾಪ್ತಿಯ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಹುನ್ನಾರ ನಡೆಸಿದೆ. 
ತಾಲೂಕಿನ ಆಲ್ಕೋಡ್ ಕೆಪಿಎಸ್ ಶಾಲೆಗೆ ಅಡಕಲಗುಡ್ಡ, ಸಿಂಗೇರಿದೊಡ್ಡಿ, ಉಲಕಬಂಡ, ಕುರ್ಲೇರದೊಡ್ಡಿ ಗ್ರಾಮಗಳ ಶಾಲೆಗಳನ್ನು ವಿಲೀನಗೊಳಿಸಲು ಮುಂದಾಗಿದೆ. 1ನೇ ತರಗತಿಯಿಂದಲೇ ಕನ್ನಡ ಮಾಧ್ಯಮದೊಂದಿಗೆ ಇಂಗ್ಲಿಷ್ ಮಾಧ್ಯಮ ಆರಂಭಿಸುತ್ತಿದೆ. 
ಕೆಲವು ಕಡೆಗಳಲ್ಲಿ ದ್ವಿಭಾಷಾ ಮಾಧ್ಯಮದ ಹೆಸರಲ್ಲಿ ಕೇವಲ ಇಂಗ್ಲಿಷ್ ಮಾಧ್ಯಮ ಕಲಿಸಲು ತಯಾರಿ ನಡೆಸುತ್ತಿದ್ದು, ಯಾವುದೇ ಕಾರಣಕ್ಕೂ ಕನ್ನಡ ಮಾಧ್ಯಮ ತೆಗೆಯುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 
ಶಾಲೆಗಳ ವಿಲೀನ ಕೈಬಿಡಬೇಕು. ಕನ್ನಡ ಮಾಧ್ಯಮ ಉಳಿಸಬೇಕೆಂದು ಒತ್ತಾಯಿಸಿದರು.
ಪ್ರಮುಖರಾದ ಶಂಕ್ರಪ್ಪ ಉಲಕಬಂಡ, ಹನುಮಯ್ಯ ಸಿಂಗೇರಿದೊಡ್ಡಿ, ವೆಂಕಟೇಶ ಕೊರ್ಲೆದೊಡ್ಡಿ, ಮಲ್ಲೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net