ಸರ್ಕಾರದಿಂದ ರಸ್ತೆ ಕಾಮಗಾರಿಗಾಗಿ 10 ಎಕರೆ ಭೂಮಿಯನ್ನು ಮಂಜೂರಾಗಿದೆ ಎನ್ನುತ್ತಿದ್ದಾರೆ. ಆದರೆ 30 ಎಕರೆ ಭೂಮಿಯನ್ನು ಕಬಳಿಸಲಾಗಿದೆ. ಭೂಮಿಯ ಮಣ್ಣು ರಸ್ತೆಯ ಕಾಮಗಾರಿಗಾಗಿ ಬಿಡುವುದಿಲ್ಲವೆಂದು ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ರಸ್ತೆ ಕಾಮಗಾರಿ ಮಣ್ಣಿಗಾಗಿ ಬೇರೆ ಕಡೆ ನೀಡಬೇಕು. ಇಲ್ಲಿ ನಾವು ಮಣ್ಣು ಅಗೆಯಲು ಬಿಡುವುದಿಲ್ಲ. ಆನಂದಗಲ್, ಹರ‌್ವಪೂರ, ತುಪ್ಪದೂರು ಗ್ರಾಮದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲಾ ಕಟ್ಟಡಕ್ಕೆ ಮಾತ್ರ ನೀಡಬೇಕು ಎಂದು ಗ್ರಾಪಂ ಮಾಜಿ ಸದಸ್ಯ ಹನುಮಂತ, ಗ್ರಾಮಸ್ಥರಾದ ರಾಘವೇಂದ್ರ ಗುತ್ತೆದಾರ, ಕಂಡೋಜಿರಾವ್, ಶರಣಪ್ಪಗೌಡ ಒತ್ತಾಯಿಸಿದರು.