ವೈಯಕ್ತಿಕ-ಸಮುದಾಯ ಕಾಮಗಾರಿಗೆ ಅವಕಾಶ

ಕುರ್ಡಿ ಗ್ರಾಮ ಪಂಚಾಯತಿ ಅವರಣದಲ್ಲಿ  ವಿಬಿ-ಜಿ ರಾಮ್ ಜಿ ಯೋಜನೆಯ ಜಾಗೃತಿ ಕಾರ್ಯಕ್ರಮ ಜರುಗಿತು.  ತಾಲೂಕು ಐಇಸಿ ಸಂಯೋಜಕರಾದ ಈರೇಶ,  ಗ್ರಾಪಂ ಕಾರ್ಯದರ್ಶಿ ಮಹೆಬೂಬ, ಪ್ರಸಾದ, ಡಿಇಒ ಪ್ರಾಣೇಶ, ಆರೋಲಿ ಗ್ರಾಪಂ ಸಿಬ್ಬಂದಿ ಬಸವರಾಜ, ಲಕ್ಷ್ಮಣ ಇನ್ನಿತರರು ಇದ್ದರು.
ಕುರ್ಡಿ ಗ್ರಾಮ ಪಂಚಾಯತಿ ಅವರಣದಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯ ಜಾಗೃತಿ ಕಾರ್ಯಕ್ರಮ ಜರುಗಿತು. ತಾಲೂಕು ಐಇಸಿ ಸಂಯೋಜಕರಾದ ಈರೇಶ, ಗ್ರಾಪಂ ಕಾರ್ಯದರ್ಶಿ ಮಹೆಬೂಬ, ಪ್ರಸಾದ, ಡಿಇಒ ಪ್ರಾಣೇಶ, ಆರೋಲಿ ಗ್ರಾಪಂ ಸಿಬ್ಬಂದಿ ಬಸವರಾಜ, ಲಕ್ಷ್ಮಣ ಇನ್ನಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕು
  • ಐಇಸಿ
  • ಸಂಯೋಜಕ

ಮಾನ್ವಿ:

ವಿಬಿ-ಜಿ ರಾಮ್‌ಜಿಯಲ್ಲಿ ಕೂಲಿ ಕಾರ್ಮಿಕರಿಗೆ ಉದೋಗ ನೀಡಲಾಗುತ್ತಿದ್ದು, ವಲಸೆ ಹೋಗದೇ ಗ್ರಾಮದಲ್ಲೇ ಕೆಲಸ ಮಾಡಬೇಕು ಎಂದು ತಾಲೂಕು ಐಇಸಿ ಸಂಯೋಜಕ ಈರೇಶ ಹೇಳಿದರು.

ಕುರ್ಡಿ ಗ್ರಾಮದಲ್ಲಿ ಸೋಮವಾರ ಗ್ರಾಪಂ ಆವರಣದಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮಗಳಲ್ಲಿನ ಕೂಲಿ ಕಾರ್ಮಿಕರು ವಲಸೆ ಹೊಗುವುದನ್ನು ತಪ್ಪಿಸುವುದಕ್ಕಾಗಿ ಮನೆ ಮನೆಗಳಿಗೆ ತೆರಳಿ ಕರಪತ್ರಗಳನ್ನು ವಿತರಿಸಿ ವಲಸೆ ತಪ್ಪಿಸಲು ಜಾಗೃತಿ ಮೂಡಿಸಲಾಗುತ್ತಿದೆ.
ಪ್ರತಿ ಕುಟುಂಬಕ್ಕೆ ವಾರ್ಷಿಕ 125 ಮಾನವ ದಿನಗಳಿಗೆ ಕೆಸಲ ನೀಡಲಾಗುವುದು. ದಿನಗೂಲಿಯನ್ನು 382 ರೂ. ಗೆ ಹೆಚ್ಚಳ ಮಾಡಲಾಗಿದೆ. ವಾರ್ಷಿಕ ಒಂದು ಗ್ರಾಮೀಣ ರೋಜ್‌ಗಾರ್ ಗ್ಯಾರಂಟಿ ಕಾರ್ಡ್‌ಗೆ 47,750ರೂ. ಗಳಿಸಲು ಅವಕಾಶವಿದೆ. ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳು ಸೇರಿ 318ಕಾಮಗಾರಿಗಳನ್ನು ಕೈಗೊಳ್ಳುವುದಕ್ಕೆ ಅವಕಾಶವಿದೆ. ನಮೂನೆ-06 ರ ಮೂಲಕ ಅರ್ಜಿಯನ್ನು ಸಲ್ಲಿಸಿ ಗ್ರಾಮದಲ್ಲಿಯೇ ಕೂಲಿ ಕೆಲಸವನ್ನು ಪಡೆಯಬಹುದು ಎಂದರು.
ಕುರ್ಡಿ ಗ್ರಾಮದಲ್ಲಿ ನಮೂನೆ-06 ರ ಮೂಲಕ 454 ಜನ ಕೂಲಿ ಕಾರ್ಮಿರಿಂದ ಅರ್ಜಿಗಳನ್ನು ಸ್ವೀಕರಿಸಲಾಯಿತು. ಅರೋಲಿ ಗ್ರಾಮದಲ್ಲಿ ನಮೂನೆ-06 ರ ಮೂಲಕ 115 ಜನ ಕೂಲಿ ಕಾರ್ಮಿಕರಿಂದ ಅರ್ಜಿಗಳನ್ನು ಪಡೆಯಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net