ಲಿಂಗಸುಗೂರಿನಲ್ಲಿ ಸಹಾಯಕ ಅಯುಕ್ತ ಕಚೇರಿಯ ಪ್ರಥಮ ದರ್ಜೆ ಸಹಾಯಕಿ ಅನುಪಮಾ ಸಿಂಗ್‌ಗೆ ಪ್ರಾಂತ ರೈತ ಸಂಘದಿಂದ ಮನವಿ ಸಲ್ಲಿಸಲಾಯಿತು. ಸಂಘದ ತಾಲೂಕು ಸಂಚಾಲಕ ನಿಂಗಪ್ಪ ವೀರಾಪುರ, ಆಂಜನೇಯ ನಾಗಲಾಪುರ, ಗಂಗಪ್ಪ ಇತರರಿದ್ದರು.
ತಾಲೂಕಿನಲ್ಲಿ ಅತಿವೃಷ್ಟಿಯಿಂದ ರೈತರು ಬೆಳೆದ ತೊಗರಿ, ಸೂರ್ಯಕಾಂತಿ ಬೆಳೆಗಳು ಹಾಳಾಗಿವೆ. ಸಾಲ ಮಾಡಿ ಬೆಳೆದ ಬೆಳೆಗಳು ಅಲ್ಪ ಸ್ವಲ್ಪ ಪಡೆದಿದ್ದಾರೆ. ಆದ್ದರಿಂದ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳನ್ನು ತೆರೆದು ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಸಂಘದ ತಾಲೂಕು ಸಂಚಾಲಕ ನಿಂಗಪ್ಪ ವೀರಾಪುರ, ಮುಖಂಡರಾದ ಆಂಜನೇಯ ನಾಗಲಾಪುರ, ಗಂಗಪ್ಪ, ಹೊಳೆಪ್ಪ, ಮೌಲಾಲಿ, ಹನುಮಂತ ಕೆರೆಹೊಲ, ಬಾಬುಜಾನಿ ಇದ್ದರು.