ರಸಗೊಬ್ಬರ ತುಂಬಿದ್ದ ಲಾರಿಯು ಸಿಂಧನೂರು ಮಾರ್ಗದಿಂದ ಕಾರಟಗಿ ಕಡೆಗೆ ಹಾಗೂ ಸಿಂಧನೂರು ಮಾರ್ಗವಾಗಿ ಬರುತ್ತಿದ್ದ ಹಾಲಿನ ವಾಹನ ನಡುವೆ ಡಿಕ್ಕಿಯಾಗಿದೆ. ಇದೇ ಸಂದರ್ಭದಲ್ಲಿ ಲಾರಿ ಹಿಂಬದಿಯಿಂದ ಬೈಕ್‌ನಲ್ಲಿ ಬರುತ್ತಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎರಡೂ ವಾಹನಗಳು ನುಜ್ಜುಗುಜ್ಜಾಗಿದ್ದು, ಸ್ಥಳಕ್ಕೆ ಡಿವೈಎಸ್ಪಿ ಚಂದ್ರಶೇಖರ ನಾಯಕ, ಗ್ರಾಮೀಣ ಪೊಲೀಸ್ ಠಾಣೆ ಪಿಎಸ್‌ಐ ಮೌನೇಶ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.