ಕೈಗಾರಿಕೋದ್ಯಮಿಗಳಿಗೆ ಒಂದು ದಿನದ ಕಾರ್ಯಾಗಾರ ಯಶಸ್ವಿ

 ರಾಯಚೂರಿನ ಕೈಗಾರಿಕಾ ಕೇಂದ್ರದಲ್ಲಿ ಗುರುವಾರ ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಬೆಂಗಳೂರಿನ ಭಾರತೀಯ ರಫ್ತು ಉತ್ತೇಜನ ಸಂಸ್ಥೆ ವತಿಯಿಂದ ಕೈಗಾರಿಕೋದ್ಯಮಿಗಳಿಗೆ ಒಂದು ದಿನದ ಅರಿವು ಮೂಡಿಸುವ ಕಾರ್ಯಾಗಾರಕ್ಕೆ ಬೆಂಗಳೂರಿನ ಫಿವೋ ಉಪ ನಿರ್ದೇಶಕಿ ಧನೀಶಾ ಚಾಲನೆ ನೀಡಿದರು.
ರಾಯಚೂರಿನ ಕೈಗಾರಿಕಾ ಕೇಂದ್ರದಲ್ಲಿ ಗುರುವಾರ ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಬೆಂಗಳೂರಿನ ಭಾರತೀಯ ರಫ್ತು ಉತ್ತೇಜನ ಸಂಸ್ಥೆ ವತಿಯಿಂದ ಕೈಗಾರಿಕೋದ್ಯಮಿಗಳಿಗೆ ಒಂದು ದಿನದ ಅರಿವು ಮೂಡಿಸುವ ಕಾರ್ಯಾಗಾರಕ್ಕೆ ಬೆಂಗಳೂರಿನ ಫಿವೋ ಉಪ ನಿರ್ದೇಶಕಿ ಧನೀಶಾ ಚಾಲನೆ ನೀಡಿದರು.
Published on
ರಾಯಚೂರು ಜಿಲ್ಲೆಯ ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಹಾಗೂ ಹೊಸ ಉದ್ಯಮಶೀಲರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಬೆಂಗಳೂರಿನ ಭಾರತೀಯ ರಫ್ತು ಉತ್ತೇಜನ ಸಂಸ್ಥೆ ವತಿಯಿಂದ ಜಿಲ್ಲೆಯ ಕೈಗಾರಿಕೋದ್ಯಮಿಗಳಿಗೆ ಒಂದು ದಿನದ ಅರಿವು ಮೂಡಿಸುವ ಕಾರ್ಯಾಗಾರವು ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಗುರುವಾರ ಯಶಸ್ವಿಯಾಗಿ ನಡೆಯಿತು.
ಬೆಂಗಳೂರಿನ ಫಿವೋ ಉಪ ನಿರ್ದೇಶಕಿ ಧನೀಶಾ ಮೀನು ಕಾರ್ಯಕ್ರಮದಲ್ಲಿ ಭಾಗವಹಿಸಿ ಜಿಲ್ಲೆಯ ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಹಾಗೂ ಹೊಸ ಉದ್ಯಮಶೀಲರನ್ನು ಪ್ರೋತ್ಸಾಹಿಸುವ ವಿಷಯಗಳು ಮತ್ತು ರಫ್ತು ವ್ಯಾಪಾರದ ಟ್ರೇಡ್ ಪಾಲಿಸಿ-2023ರ ಕುರಿತು ಸವಿಸ್ತಾರವಾಗಿ ವಿವರಿಸಿದರು.
ನಂತರ ಕಸ್ಟಮ್ಸ್ ಹೌಸ್ ಏಜೆಂಟ್ಸ್ ಅಸೋಷಿಯೇಶನ್ ಲಿಮಿಟೆಡ್ ಕಾರ್ಯದರ್ಶಿ ಗಿರೀಶ್ ನಾರಾಯಣ್ ಮಾತನಾಡಿ, ರಫ್ತು ವ್ಯಾಪಾರದ ಕುರಿತು ಅಗತ್ಯ ದಾಖಲಾತಿಗಳನ್ನು ಹೇಗೆ ತಯಾರಿಸುವುದು ಹಾಗೂ ಅಂತರಾಷ್ಟ್ರೀಯ ವ್ಯಾಪಾರ, ಸುಂಕ ತೆರಿಗೆ ಈ ವಿಷಯದ ಕುರಿತು ಸವಿಸ್ತಾರವಾಗಿ ಕಾರ್ಯಾಗಾರದಲ್ಲಿ ತಿಳಿಸಿದರು.
ಇಸಿಜಿಸಿ ಲಿಮಿಟೆಡ್ ಸಹಾಯಕ ವ್ಯವಸ್ಥಾಪಕ ಭರತ್ ಗುಂಟೂರು ಮಾತನಾಡಿ, ಇನ್ವಾಯಿಸ್, ಪ್ಯಾಕಿಂಗ್ ಲಿಸ್ಟ್, ಕಸ್ಟಮ್ಸ ಕ್ಲೀಯರೆನ್ಸ್, ರಫ್ತು ವಿಮೆ ಮೂಲಕ ಸಿಗುವ ರಕ್ಷಣೆಗಳು, ಲಾಜಿಸ್ಟಿಕ್ಸೃ್ ಮತ್ತು ಶಿಪ್ಪಿಂಗ್ ಸರಕುಗಳನ್ನು ಸುರಕ್ಷಿತವಾಗಿ ವಿದೇಶಕ್ಕೆ ಕಳುಹಿಸುವ ವಿಧಾನಗಳು ಆನ್‌ಲೈನ್ ಮೂಲಕ ವಿದೇಶಿ ಗ್ರಾಹಕರನ್ನು ತಲುಪುವುದು ಹೇಗೆ ಎಂಬುದರ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ. ಸತೀಶಕುಮಾರ್, ಉಪನಿರ್ದೇಶಕ ರಾಜಕುಮಾರ ಪಾಟೀಲ್, ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಸಾವಿತ್ರಿ ಪುರುಷೋತ್ತಮ್, ಕಾಟನ್ ಮಿಲ್ಲರ್ಸ್ ಸಂಘದ ಅಧ್ಯಕ್ಷ ವಿ. ಲಕ್ಷ್ಮೀರೆಡ್ಡಿ, ಕಾರ್ಯದರ್ಶಿ ಜಂಬಣ್ಣ ಯಕ್ಲಾಸಪೂರು,ತ್ರೀವಿಕ್ರಮ ಜೋಷಿ ಸೇರಿ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net