ಜಿಲ್ಲೆಯ ಅಭಿವೃದ್ಧಿಗೆ ಹಿರಿಯ ಹಾಗೂ ಅನುಭವಿ ನಾಯಕ ಎನ್.ಎಸ್.ಬೋಸರಾಜು ಸಚಿವ ಸ್ಥಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಲು ಒತ್ತಾಯಿಸಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ರಾಯಚೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಮಾಡಿದರು. ಸಂಘದ ಕಲ್ಯಾಣ ಕರ್ನಾಟಕ ಗೌರವಾಧ್ಯಕ್ಷ ಸೈಯದ್ ಮಾಸೂಮ್, ವಿಭಾಗೀಯ ಅಧ್ಯಕ್ಷ ರಾಮು, ಜಿಲ್ಲಾಧ್ಯಕ್ಷ ಫೀರ್‌ಪಾಷಾ, ಯೂಸೂಫ್ ಖಾನ್ ಇದ್ದರು.
ರಾಯಚೂರು ಜಿಲ್ಲೆಯ ಅಭಿವೃದ್ಧಿಗೆ ಹಿರಿಯ ಹಾಗೂ ಅನುಭವಿ ನಾಯಕ ಎನ್.ಎಸ್.ಬೋಸರಾಜು ಸಚಿವ ಸ್ಥಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಲು ಒತ್ತಾಯಿಸಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.
ಎಂಎಲ್ಸಿ ಎನ್.ಎಸ್.ಬೋಸರಾಜು ಅವರು ಕಳೆದ ಎರಡು ವರ್ಷಗಳಿಂದ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿ ಸಿದ್ದಾರೆ. ಯಾವುದೇ ಅವ್ಯವಹಾರಗಳಿಗೆ ಅವಕಾಶ ನೀಡದೇ ಸ್ವಚ್ಛ ರಾಜಕೀಯ ಸೇವೆ ಸಲ್ಲಿಸಿರುವ ಅವರು ಜನಮನ್ನಣೆ ಗಳಿಸಿದ್ದಾರೆ.
ಜಿಲ್ಲೆಯ ಸಮಸ್ಯೆಗಳು ಹಾಗೂ ಅಗತ್ಯಗಳ ಬಗ್ಗೆ ಸಂಪೂರ್ಣ ಅರಿವು ಹೊಂದಿರುವ ಕಾರಣ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಿದರೆ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ವೇಗ ಸಿಗಲಿದೆ ಎಂದು ತಿಳಿಸಿದರು.
ಜಿಲ್ಲೆಯವರೇ ಆಗಿರುವ ಎನ್.ಎಸ್.ಬೋಸರಾಜು ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡುವ ಮೂಲಕ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು
ಈ ಸಂದರ್ಭದಲ್ಲಿ ಸಂಘದ ಕಲ್ಯಾಣ ಕರ್ನಾಟಕ ಗೌರವಾಧ್ಯಕ್ಷ ಸೈಯದ್ ಮಾಸೂಮ್, ವಿಭಾಗೀಯ ಅಧ್ಯಕ್ಷ ರಾಮು, ಜಿಲ್ಲಾಧ್ಯಕ್ಷ ಫೀರ್‌ಪಾಷಾ,ಯೂಸೂಫ್ ಖಾನ್, ಸೇರಿದಂತೆ ಅನೇಕರಿದ್ದರು.