ನಮ್ಮ ಗ್ರೋಮೋರ್ ಕೇಂದ್ರಕ್ಕೆ ನೋಟಿಸ್ ಜಾರಿ

ಅರಕೇರಾದಲ್ಲಿ ನಮ್ಮ ಗ್ರೋಮೋರ್ ಕೇಂದ್ರಕ್ಕೆ ಕೃಷಿ ಅಧಿಕಾರಿ ಅಮರೇಶ ಭೇಟಿ ನೀಡಿ ಷೋಕಾಸ್ ನೋಟಿಸ್ ಜತೆಗೆ ಎಚ್ಚರಿಕೆ ನೀಡಿದರು.
ಅರಕೇರಾದಲ್ಲಿ ನಮ್ಮ ಗ್ರೋಮೋರ್ ಕೇಂದ್ರಕ್ಕೆ ಕೃಷಿ ಅಧಿಕಾರಿ ಅಮರೇಶ ಭೇಟಿ ನೀಡಿ ಷೋಕಾಸ್ ನೋಟಿಸ್ ಜತೆಗೆ ಎಚ್ಚರಿಕೆ ನೀಡಿದರು.
Published on
ನಮ್ಮ ಗ್ರೋಮೋರ್ ಕೇಂದ್ರಕ್ಕೆ ನೋಟಿಸ್ ಜಾರಿ Notice issued to our Gromore Center
* ಯೂರಿಯಾ ಜತೆಗೆ ಇತರ ರಸಗೊಬ್ಬರ ಖರೀದಿಗೆ ಒತ್ತಡ ಆರೋಪ 
ಅರಕೇರಾ: ಯೂರಿಯಾ ಗೊಬ್ಬರದ ಜತೆ ಇತರ ರಸಗೊಬ್ಬರ ಕಡ್ಡಾಯವಾಗಿ ಖರೀದಿಸಲು ರೈತರಿಗೆ ಒತ್ತಡ ಹಾಕುತ್ತಿದ್ದಾರೆ ಎಂಬ ಆರೋಪದ ಮೇರೆಗೆ ಪಟ್ಟಣದ ನಮ್ಮ ಗ್ರೋಮೋರ್ ರಸಗೊಬ್ಬರ, ಎಣ್ಣೆ, ಬೀಜ ಮಾರಾಟ ಕೇಂದ್ರಕ್ಕೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅಮರೇಶ ಶನಿವಾರ ದಾಳಿ ನಡೆಸಿ, ಷೋಕಾಸ್ ನೋಟಿಸ್ ನೀಡಿದ್ದಾರೆ. 
ರಸಗೊಬ್ಬರ ನಿಯಂತ್ರ ಕಾಯ್ದೆ ನಿಯಮಗಳನ್ನು ಉಲ್ಲಂಘನೆ ಮಾಡಿದ್ದು, ರಸಗೊಬ್ಬರ ಮಾರಾಟ ಮಾಡುವುದನ್ನು ರದ್ದು ಪಡಿಸುವುದಾಗಿ ಎಚ್ಚರಿಕೆ ನೀಡಿ, ಏಳು ದಿನಗಳ ಒಳಗಾಗಿ ನೋಟಿಸ್‌ಗೆ ಉತ್ತರ ನೀಡಬೇಕು ಎಂದು ಕೃಷಿ ಅಧಿಕಾರಿ ಸೂಚಿಸಿದರು. 
ಇದೇ ವೇಳೆ ರೈತ ಸಂಘದ ತಾಲೂಕು ಅಧ್ಯಕ್ಷ ಹರ್ಷವರ್ಧನ ನಾಯಕ ದೊರೆ ಮಾತನಾಡಿ, ರೈತರ ಅನುಕೂಲಕ್ಕಾಗಿ ಕಾರ್ಯನಿರ್ವಹಿಸಬೇಕಾದ ನಮ್ಮ ಗ್ರೋಮೋರ್ ಎಣ್ಣೆ, ಬೀಜ ಹಾಗೂ ರಸಗೊಬ್ಬರ ಮಾರಾಟ ಕೇಂದ್ರದಲ್ಲಿ ರೈತರಿಗೆ ಯೂರಿಯಾ ಮಾತ್ರ ನೀಡದೆ ಅದರೊಂದಿಗೆ ಭಾರತ್ ಎನ್‌ಪಿಕೆ 20:20:0:13 ಸೇರಿದಂತೆ ಲಭ್ಯವಿರುವ ಇತರ ರಸಗೊಬ್ಬರಗಳಲ್ಲಿ ಒಂದನ್ನು ಕಡ್ಡಾಯವಾಗಿ ಖರೀದಿಸಬೇಕು ಎಂದು ಒತ್ತಾಯಿಸುತ್ತಿದ್ದರು. 
ಬೇಡ ಎಂದರೆ ಯೂರಿಯಾ ನೀಡುತ್ತಿರಲಿಲ್ಲ. ಹೀಗಾಗಿ ರೈತರು ಅನಿವಾರ್ಯವಾಗಿ ಅಗತ್ಯವಿಲ್ಲದ ರಸಗೊಬ್ಬರ ಖರೀದಿಸಬೇಕಾಗಿತ್ತು ಎಂದು ಆರೋಪಿಸಿದರು. 
ಸಂಘದ ಉಪಾಧ್ಯಕ್ಷ ಹನುಮಗೌಡ ಚಡಕಲಗುಡ್ಡ, ಸದಸ್ಯರಾದ ಶರಣಪ್ಪ, ಯಂಕೋಬ ಖಾನಾಪುರ, ರೈತ ಮಹಾದೇವ ಜಲ್ಲೆ ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net