12,795 ಹೆಕ್ಟೇರ್ ಕೃಷಿ ಭೂಮಿ: ಹಾಲಾಪುರ ಹೋಬಳಿ ಕೆಂದ್ರವಾಗಿದ್ದು, ಜಂಗಮರಹಳ್ಳಿ, ಚಿಕ್ಕ ಉದ್ಬಾಳ, ನಂದಿಹಾಳ, ಯದ್ದಲದಿನ್ನಿ, ರಾಮಲದಿನ್ನಿ, ನಾಗಲದಿನ್ನಿ, ಚಿನ್ನಪುರ, ತುಗ್ಗಲದಿನ್ನಿ, ಹಂಚಿನಾಳ, ಹಿರೇಕಡಬೂರ ಸೇರಿದಂತೆ 30ಕ್ಕೂ ಹೆಚ್ಚು ಗ್ರಾಮಗಳು ಒಳಪಡುತ್ತವೆ. ಈ ಭಾಗದಲ್ಲಿ ನೀರಾವರಿ ಮತ್ತು ಖುಷ್ಕಿ ಪ್ರದೇಶವಿದೆ. ಒಟ್ಟು 13,795 ಹೆಕ್ಟೇರ್ ಪ್ರದೇಶದ ಪೈಕಿ 12,795 ಹೆಕ್ಟೇರ್‌ನಲ್ಲಿ ಸಾಗುವಳಿ ಮಾಡಲಾಗುತ್ತಿದೆ. ಸದ್ಯ ಮುಂಗಾರು ಆರಂಭದ ಹಂತದಲ್ಲಿದ್ದು, ಕೃಷಿಕರು ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಹೀಗಾಗಿ ಸಕಾಲಕ್ಕೆ ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ರೈತ ಸಂಪರ್ಕ ಕೇಂದ್ರ ಒದಗಿಸಬೇಕಿದೆ. ಆದ್ದರಿಂದ ತ್ವರಿತವಾಗಿ ಸಿಬ್ಬಂದಿ ಹಾಗೂ ಸೌಲಭ್ಯಗಳ ಕೊರತೆ ನೀಗಿಸಲಿ ಎನ್ನುವುದು ಕೃಷಿಕರ ಒತ್ತಾಯವಾಗಿದೆ.