ಮಾ.27 ರ ಸಚಿವ ಸಂಪುಟದಿಂದ ಉಪಯೋಗ ಇಲ್ಲ

ಅಂಬೇಡ್ಕರ್ ಪಿಪುಲ್ಸ್ ಪಾರ್ಟಿ ರಾಜ್ಯ ಕಾರ್ಯಾಧ್ಯಕ್ಷ ಮಹೇಂದ್ರ ಕುಮಾರ ಮಿತ್ರ
ಅಂಬೇಡ್ಕರ್ ಪಿಪುಲ್ಸ್ ಪಾರ್ಟಿ ರಾಜ್ಯ ಕಾರ್ಯಾಧ್ಯಕ್ಷ ಮಹೇಂದ್ರ ಕುಮಾರ ಮಿತ್ರ
Published on
ರಾಯಚೂರು ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ಮೆಮೋ ಹಿಂಪಡೆಯದೇ ಮಾ.27 ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ನಡೆದರೆ ಮಾದಿಗ ಸಮುದಾಯಕ್ಕೆ ಯಾವ ನ್ಯಾಯವೂ ಸಿಗುವದಿಲ್ಲವೆಂದು ಅಂಬೇಡ್ಕರ್ ಪಿಪುಲ್ಸ್ ಪಾರ್ಟಿ ರಾಜ್ಯ ಕಾರ್ಯಾಧ್ಯಕ್ಷ ಮಹೇಂದ್ರ ಕುಮಾರ ಮಿತ್ರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇವಿಂದರ ಸಿಂಗ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವೂ ನಿವೃತ್ತ ನ್ಯಾಯಮೂರ್ತಿಗಳಿಂದ ಸಮೀಕ್ಷೆ ನಡೆಸಿ ಒಳ ಮೀಸಲಾತಿಗೆ ನೀಡಲು ನೀಡಿರುವ ಆದೇಶದ ಮೇರೆಗೆ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗ ರಚಿಸಲಾಗಿತ್ತು.
ಆಯೋಗ ನೀಡಿದ್ದ ವರದಿಯನ್ನು ಪರಿಗಣಿಸದೇ ಸರ್ಕಾರವೇ ಪರಿಶಿಷ್ಟ ಜಾತಿಗಳಲ್ಲಿ ಮೂರು ಗುಂಪುಗಳನ್ನಾಗಿಸಿ ಪ್ರವರ್ಗ-ಎ ಗೆ ಶೇ.6, ಪ್ರವರ್ಗ ಬಿಗೆ ಶೇ.6, ಪ್ರವರ್ಗ ಸಿಗೆ ಶೇ.5 ಮೀಸಲು ನಿಗಧಿ ಮಾಡಿತ್ತು. ಆದರೆ ಎಸ್ಸಿ ಸಮುದಾಯಗಳಿಗೆ ಶೇ.17 ಮೀಸಲಾತಿಗೆ ಉಚ್ಚ ನ್ಯಾಯಾಲಯ ರದ್ದುಪಡಿಸಿಲ್ಲ. ಸರ್ಕಾರವೇ ಹಿಂಪಡೆದಿಲ್ಲ. ಆದರೆ ಮಾದಿಗ ಸಮೂದಾಯ ಸಚಿವರುಗಳಾ ಕೆ.ಎಚ್.ಮುನಿಯಪ್ಪ ಮತ್ತು ಆರ್.ಬಿ.ತಿಮ್ಮಾಪುರು ಇವರು ನಿಜವಾಗಿಯೂ ಸಮೂದಾಯ ಕಾಳಜಿಯಿದ್ದರೆ ರಾಜ್ಯದ ಸರ್ಕಾರ ಹೈಕೋರ್ಟಿಗೆ ಸಲ್ಲಿಸಿರುವ ಮೆಮೊ ಹಿಂಪಡೆದ ನಂತರವೇ ಸಚಿವ ಸಂಪುಟಕ್ಕೆ ಹಾಜರಾಗಬೇಕು.
ಇಲ್ಲದೇ ಹೋದರೆ ಒಳ ಮೀಸಲಾತಿಯಿಲ್ಲದೇ ಶಿಕ್ಷಣ ಮತ್ತು ಉದ್ಯೋಗ ಪಡೆಯಬೇಕಾಗುತ್ತದೆ. ಶೇ.15 ಮೀಸಲಾತಿಯಲ್ಲಿಯೇ ನೇಮಕಾತಿ ನಡೆದರೆ ಸಮಾಜ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಶೇ.15 ಮತ್ತು ಸಾಮಾನ್ಯ ವರ್ಗಕ್ಕೆ ಮೀಸಲಾದ 40 ರು ಮೀಸಲು ಪಡೆದು ಮೀಸಲಾತಿಯನ್ನು ಪಡೆಯಬೇಕೆಂದರು. ಈ ಸಂದರ್ಭದಲ್ಲಿ ಪ್ರಮುಖರಾದ ಆಂಜಿನೇಯ್ಯ, ಹುಸೇನಬಾಷಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net