ನೂತನವಾಗಿ ಉದ್ಘಾಟನೆಗೊಂಡ ಗೋದ್ರೇಜ್ ಶೋರಮ್

ರಾಯಚೂರಿನ ಚಂದ್ರ ಮೌಳೇಶ್ವರ ವೃತ್ತದ ಹತ್ತಿರದಲ್ಲಿ ನೂತನಾವಗಿ ಆರಂಭಗೊಂಡ ಗೋದ್ರೇಜ್ ಶೋರಮ್‌ನ್ನು  ಮಾಲೀಕರಾದ ರಾಜಗೋಪಾಲ್ ಇನಾನಿ, ಪುರುಷೋತ್ತಮ ಇನಾನಿ, ಕಿಶನ್ ಗೋಪಾಲ್ ಜಾವೆರ್ ಹಾಗೂ ರಾಮಾನುಜ್ ಝಾವರ್ ಬುಧವಾರ ಉದ್ಘಾಟಿಸಿದರು. ಶೋರಮ್ನ ಕರ್ನಾಟಕದ ವಲಯ ವ್ಯವಹಾರ ಮುಖ್ಯಸ್ಥ ರೋಹಿತ್ ಶ್ರೀವಾಸ್ತವ್, ಶಾಖೆ ವ್ಯವಸ್ಥಾಪಕ ಹಿತೇಶ ಭಾರದ್ವಾಜ್ ಇದ್ದರು.

Published on
ರಾಯಚೂರು 
ನಗರದ ಜನತೆಗೆ ಗೃಹೋಪಯೋಗಿ ಉಪಕರಣಗಳು ಮತ್ತು ಪೀಠೋಪಕರಣಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ನಗರದ ಚಂದ್ರ ಮೌಳೇಶ್ವರ ವೃತ್ತದ ಹತ್ತಿರದಲ್ಲಿ ನೂತನವಾಗಿ ಆರಂಭಗೊಂಡ  ಗೋದ್ರೇಜ್ ಕಂಪನಿಯ ಶೋರಮ್ ಬುಧವಾರ ಉದ್ಘಾಟನೆ ಮಾಡಲಾಯಿತು.

ಕಾರ್ಯಕ್ರಮವನ್ನು ನಾಲ್ಕುಜನ ಮಾಲೀಕರಾದ ರಾಜಗೋಪಾಲ್ ಇನಾನಿ, ಪುರುಷೋತ್ತಮ ಇನಾನಿ, ಕಿಶನ್ ಗೋಪಾಲ್ ಜಾವೆರ್ ಹಾಗೂ ರಾಮಾನುಜ್ ಜಾವೆರ್ ಉದ್ಘಾಟಿಸಿ ಮಾತನಾಡಿದರು. ದಶಕಗಳಿಂದ ಜನರ ನಂಬಿಕೆಗೆ ಪಾತ್ರವಾಗಿರುವ ಗೋದ್ರೇಜ್‌ನ ಅತ್ಯಾಧುನಿಕ ಫ್ರಿಜ್, ವಾಷಿಂಗ ಮೆಷಿನ್, ಎಸಿ ಸೇರಿದಂತೆ ವಿವಿಧ ಗೃಹೋಪಯೋಗಿ ಉಪಕರಣಗಳು ಮತ್ತು ಆಧುನಿಕ ಪೀಠೋಪಕರಣಗಳು ಈಗ ರಾಯಚೂರಿನ ಜನತೆಗೆ ಸುಲಭವಾಗಿ ಲಭ್ಯವಾಗಲಿವೆಂದು ತಿಳಿಸಿದರು.

ಅಡುಗೆಮನೆಗೆ ಬೇಕಾದ ಆಧುನಿಕ ಉಪಕರಣಗಳಿಂದ ಹಿಡಿದು ಕಚೇರಿ ಮತ್ತು ಮನೆಯ ಪೀಠೋಪಕರಣಗಳವರೆಗೆ ಎಲ್ಲವೂ ಲಭ್ಯ. ಉದ್ಘಾಟನಾ ಸಮಾರಂಭದ ಅಂಗವಾಗಿ ಆಯ್ದ ಉತ್ಪನ್ನಗಳ ಮೇಲೆ ವಿಶೇಷ ರಿಯಾಯಿತಿ ಮತ್ತು ಉಡುಗೊರೆಗಳನ್ನು ನೀಡಲಾಗುತ್ತಿದೆ. ಮಾರಾಟದ ನಂತರದ ಅತ್ಯುತ್ತಮ ಸೇವೆ ಮತ್ತು ಖಾತರಿಯ ಭರವಸೆಯಾಗಿದೆ. ನೂತನ ಶೋರಮ್ ಉದ್ಘಾಟನೆಯಿಂದಾಗಿ ಸ್ಥಳೀಯರಿಗೆ ಉದ್ಯೋಗಾವಕಾಶಗಳು ದೊರೆಯುವುದಲ್ಲದೆ, ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗಿದೆ ಎಂದರು.

ಈ ಸಂದರ್ಭದಲ್ಲಿ ಶೋರಮ್ನ ಕರ್ನಾಟಕದ ವಲಯ ವ್ಯವಹಾರ ಮುಖ್ಯಸ್ಥ ರೋಹಿತ್ ಶ್ರೀವಾಸ್ತವ್, ಶಾಖೆ ವ್ಯವಸ್ಥಾಪಕ ಹಿತೇಶ ಭಾರದ್ವಾಜ್, ಪ್ರಮುಖರಾದ ಅನಿರ್ಬನ್ ಮುಖರ್ಜಿ,ಸಿದ್ದರಾಮ ಕೊಟಗಿ, ಶರಣ ಎಸ್ ರೈ, ಸಚಿನ್ ಸೇರಿ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net