ಹೊಸವರ್ಷದ ಕಲ್ಪನೆ ಪ್ರಕೃತಿ ಕೊಡುಗೆ

ಮಸ್ಕಿಯ ದ ಶ್ರೀ ಭ್ರಮರಾಂಬ ದೇವಸ್ಥಾನದಲ್ಲಿ ಶ್ರೀ ಭ್ರಮರಾಂಬ ಚಾರಿಟಬಲ್ ಟ್ರಸ್ಟ್‌ನಿಂದ ಹಮ್ಮಿಕೊಂಡಿದ್ದ ಯುಗಾದಿ ಹಬ್ಬ-ಗೀತ ಗಾಯನ ಕಾರ್ಯಕ್ರಮವನ್ನು ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯರು ಉದ್ಘಾಟಿಸಿದರು. ಪ್ರಮುಖರಾದ ಪಂಪಣ್ಣ ಗುಂಡಳ್ಳಿ, ಚಿದಾನಂದ, ಡಾ.ಶಿವಶರಣಪ್ಪ ಇತ್ಲಿ, ಪ್ರಕಾಶ ಧಾರಿವಾಲ, ಶರಣಬಸವ ಕರಡಕಲ್, ಸಿ.ಶರಣಪ್ಪ, ವೀರೇಶ ಹಿರೇಮಠ ಇದ್ದರು.
ಮಸ್ಕಿಯ ದ ಶ್ರೀ ಭ್ರಮರಾಂಬ ದೇವಸ್ಥಾನದಲ್ಲಿ ಶ್ರೀ ಭ್ರಮರಾಂಬ ಚಾರಿಟಬಲ್ ಟ್ರಸ್ಟ್‌ನಿಂದ ಹಮ್ಮಿಕೊಂಡಿದ್ದ ಯುಗಾದಿ ಹಬ್ಬ-ಗೀತ ಗಾಯನ ಕಾರ್ಯಕ್ರಮವನ್ನು ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯರು ಉದ್ಘಾಟಿಸಿದರು. ಪ್ರಮುಖರಾದ ಪಂಪಣ್ಣ ಗುಂಡಳ್ಳಿ, ಚಿದಾನಂದ, ಡಾ.ಶಿವಶರಣಪ್ಪ ಇತ್ಲಿ, ಪ್ರಕಾಶ ಧಾರಿವಾಲ, ಶರಣಬಸವ ಕರಡಕಲ್, ಸಿ.ಶರಣಪ್ಪ, ವೀರೇಶ ಹಿರೇಮಠ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ವರರುದ್ರಮುನಿ ಶಿವಾಚಾರ್ಯರು ಆಶೀರ್ವಚನ
  • ಮಸ್ಕಿ ಯುಗಾದಿ ಹಬ್ಬ-2026ರ ಗೀತ ಗಾಯನ
ಮಸ್ಕಿ: ನಮ್ಮ ದೇಶದ ಹೊಸ ವರ್ಷ ಯುಗಾದಿಗೆ ಗಿಡ-ಮರಗಳೂ ಚಿಗುರುವಂತೆ ಮನುಷ್ಯ ಕೂಡ ಹಳತನ್ನು ಕಳಚಿ ಹೊಸ ವಿಚಾರಗಳ ಕಲಿಕೆಗೆ ಮುಂದಾಗಬೇಕಿದೆ ಎಂದು ಗಚ್ಚಿನ ಹಿರೇಮಠದ ಶ್ರೀ ವರರುದ್ರಮುನಿ ಶಿವಾಚಾರ್ಯರು ಹೇಳಿದರು.
ಪಟ್ಟಣದ ಶ್ರೀ ಭ್ರಮರಾಂಬ ದೇವಸ್ಥಾನದಲ್ಲಿ ಶ್ರೀ ಭ್ರಮರಾಂಬ ಚಾರಿಟಬಲ್ ಟ್ರಸ್ಟ್‌ನಿಂದ ಆಯೋಜಿಸಿದ್ದ ಯುಗಾದಿ ಹಬ್ಬ-2026ರ ಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತೀಯರಿಗೆ ಯುಗಾದಿ ಹೊಸ ವರ್ಷವಾಗಿದ್ದು, ಪ್ರಕೃತಿಯೇ ನಮಗೆ ಈ ಕಲ್ಪನೆ ಕೊಟ್ಟಿದೆ. ಭ್ರಮರಾಂಬ ಸಹಕಾರಿ ಸಂಸ್ಥೆ ಕೇವಲ ಹಣಕಾಸಿನ ವ್ಯವಹಾರ ಮಾಡದೆ ಸಮಾಜದಲ್ಲಿ ಹೊಸತನ ಸೃಷ್ಟಿಸುವ ಕಾರ್ಯ ಮಾಡುತ್ತಿದೆ ಎಂದರು.
ಭ್ರಮರಾಂಬ ಸಹಕಾರಿ ಸಂಸ್ಥೆಯ ಅಧ್ಯಕ್ಷ ಪಂಪಣ್ಣ ಗುಂಡಳ್ಳಿ ಮಾತನಾಡಿ, ಸಹಕಾರಿ ಸಂಸ್ಥೆ ಕಲ್ಯಾಣ ಕರ್ನಾಟಕದಲ್ಲಿ ಪ್ರಮುಖ ಸಂಸ್ಥೆಯಾಗಿದೆ. ಒಂದು ಸಾವಿರ ಕೋಟಿ ರೂ. ವ್ಯವಹಾರದ ಗುರಿ ಹೊಂದಿದ್ದು, ಸದಸ್ಯರ ಸಹಕಾರದಿಂದ ಗುರಿ ತಲುಪಲಿದ್ದೇವೆ ಎಂದರು.
ಗೀತಗಾಯನ: ಖ್ಯಾತ ಗಾಯಕ ರಾಮಚಂದ್ರ ಹಡಪದ ಹಾಗೂ ಎದೆತುಂಬಿ ಹಾಡುವೆನು ಖ್ಯಾತಿಯ ಗಾಯಕಿ ಸ್ಪರ್ಷಾ ಅವರ ಧ್ವನಿಯಿಂದ ಮೂಡಿಬಂದ ಹಳೆ ಮತ್ತು ಹೊಸ ಚಿತ್ರಗೀತೆಗಳ ಗಾಯನ, ತತ್ವಪದಗಳು, ಭಾವ-ಭಕ್ತಿಗೀತೆಗಳು, ಜನಪದ ಹಾಡುಗಳು ನೆರೆದವರ ಮನಸೂರೆಗೊಳಿಸಿದವು. ಉಮೇಶ್ ಕೀಬೋರ್ಡ್ ವಾದನ, ನಿತು ನಿನಾದ್ ಕೊಳಲುವಾದನ, ಜಲೀಲ್ ಪಾಷಾ ಅವರ ತಬಲಾ, ಶೇಷು ಮೆನನ್ ಅವರ ಡೊಲಕ್, ಶ್ರೀನಿವಾಸ ಅವರ ರಿದಂ ಪ್ಯಾಡ್ ವಾದನ ಸಂಗೀತಪ್ರಿಯರ ತಲೆದೂಗುವಂತೆ ಮಾಡಿದವು.
ಟ್ರಸ್ಟ್‌ನ ಕಾರ್ಯದರ್ಶಿ ವೀರೇಶ ಹಿರೇಮಠ, ಸದಸ್ಯರಾದ ಪ್ರಕಾಶ ಧಾರಿವಾಲ, ಮಹಾಂತೇಶ ಮಸ್ಕಿ ಮಾತನಾಡಿದರು. ಭ್ರಮರಾಂಬ ಸಹಕಾರಿ ಸಂಸ್ಥೆಯ ಉಪಾಧ್ಯಕ್ಷ ಚಿದಾನಂದ, ಟ್ರಸ್ಟ್‌ನ ಸದಸ್ಯರಾದ ಡಾ.ಶಿವಶರಣಪ್ಪ ಇತ್ಲಿ, ಶರಣಬಸವ ಕರಡಕಲ್, ಸಿ.ಶರಣಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net