ಕವಿತಾಳ: ಸಮೀಪದ ವಟಗಲ್ ಗ್ರಾಪಂ ವ್ಯಾಪ್ತಿಯ ಇರಕಲ್ ಗ್ರಾಮದಲ್ಲಿ ಜೆಸ್ಕಾಂ ಮಂಗಳವಾರ ಹೊಸ ವಿದ್ಯುತ್ ಪರಿವರ್ತಕ ಅವಳಡಿಸಿತು.
ಈಚೆಗೆ ಸುರಿದ ಮಳೆಗೆ ಟಿಸಿ ಸುಟ್ಟಿತ್ತು. ಆದರೆ, ರಿಪೇರಿ ಮಾಡಿರಲಿಲ್ಲ. ಇದರಿಂದ ಗ್ರಾಮದಲ್ಲಿ ಮೂರ‌್ನಾಲ್ಕು ದಿನ ವಿದ್ಯುತ್ ಕಡಿತಗೊಂಡು ಜನರು ತೊಂದರೆ ಅನುಭವಿಸಿದರು. ಹೀಗಾಗಿ ಜೆಸ್ಕಾಂ ನಿರ್ಲಕ್ಷೃ ಖಂಡಿಸಿ ಗ್ರಾಮಸ್ಥರು ಟಿಸಿ ಮುಂದೆ ಭಾನುವಾರ ಪ್ರತಿಭಟನೆ ನಡೆಸಿದ್ದರು. ಈ ಕುರಿತು ವಿಜಯವಾಣಿಯಲ್ಲಿ ಮಾತ್ರ ಸೋಮವಾರ ವರದಿ ಪ್ರಕಟಗೊಂಡಿತ್ತು.
ಇದರಿಂದ ಎಚ್ಚೆತ್ತ ಜೆಸ್ಕಾಂ ಅಧಿಕಾರಿಗಳು, ಮಂಗಳವಾರ ಗ್ರಾಮಕ್ಕೆ ಸಿಬ್ಬಂದಿಯನ್ನು ಕಳಿಸಿ ಹೊಸ ಟಿಸಿ ಅಳವಡಿಸಿದ್ದಾರೆ. ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ಶ್ರೀನಿವಾಸ ನಾಯಕ, ಗ್ರಾಪಂ ಸದಸ್ಯ ಸೋಮಪ್ಪ, ಮಲ್ಲಿಕಾರ್ಜುನ ಹಸ್ಮಕಲ್, ವಸಿಗೇರಪ್ಪ ಇತರರಿದ್ದರು.