ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಶಿಕ್ಷಣ ಸಚಿವ ರಾಜೀನಾಮೆಗೆ ಒತ್ತಾಯ

ಶರಣು ಕುಮಾರ
ಶರಣು ಕುಮಾರ
Published on
ರಾಯಚೂರು
ಕೇಂದ್ರ ಸರ್ಕಾರ ನೀಟ್ ಪರೀಕ್ಷೆಯನ್ನು ಪಾರದರ್ಶಕತೆ ಹಾಗೂ ದಕ್ಷತೆಯಿಂದ ನಿರ್ವಹಿಸುವಲ್ಲಿ ವಿಫಲವಾದ ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕೇಂದು ವಿದ್ಯಾರ್ಥಿ ಯುವಜನ ಒಕ್ಕೂಟದ ಸಂಚಾಲಕ ಶರಣು ಕುಮಾರ ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಯಲ್ಲಿ ಮಾತನಾಡಿ, ನೀಟ್ ಪ್ರಶ್ನೆಪರೀಕ್ಷೆ ಸೋರಿಕೆಯಿಂದ ದೇಶದಲ್ಲಿ 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಬಹುದೊಡ್ಡ ಜಾಲವಿದ್ದರೂ ಕೇಂದ್ರದ ಶಿಕ್ಷಣ ಸಚಿವರು ತಡೆಯುಲ್ಲಿ ವಿಫಲರಾಗಿದ್ದಾರೆ. ಕಳೆದ 25 ದಿನಗಳಿಂದ ಕಾಕರೋಚ್ ಪಾರ್ಟಿ ನೇತೃತ್ವದಲ್ಲಿ ಹೋರಾಟಗಾರ ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಕನಿಷ್ಟ ಸ್ಪಂದಿಸುವ ಕೆಲಸಮಾಡಿಲ್ಲ.

ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಫಜಲ್ ಖಾನ್ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹೋರಾಟಗಾರರರನ್ನು ಜೈಲಿಗೆ ಹಾಕುತ್ತಿದೆ. ರೆಪಿಸ್ಟ್‌ಗಳನ್ನು ಮುಕ್ತವಾಗಿ ಬಿಡುತ್ತಿದೆ. ನೀಟ್ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದರೂ ಕೇಂದ್ರ ಶಿಕ್ಷಣ ಸಚಿ ಧರ್ಮೇಂದ್ರ ಪ್ರಧಾನ ನೈತಿಕತೆ ಪ್ರದರ್ಶಿಸಿಲ್ಲ. ಬಿಜೆಪಿ ನೇತೃತ್ವದ ಸರ್ಕಾರ ಬಂದ ನಂತರವೇ ನೂರರು ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ. ಆದರೆ ತಪ್ಪು ತಿದ್ದಿಕೊಳ್ಳುವ ಪ್ರಯತ್ನ ಮಾಡದೇ ಅಮಾಯಕ ಜೀವಗಳ ಬಲಿಗೆ ಕೇಂದ್ರ ಸರ್ಕರ ಕಾರಣವಾಗಿದೆ.
ಕೂಡಲೇ ಕೇಂದ್ರ ವಿರುದ್ದ ವಿದ್ಯಾರ್ಥಿ ಯುವಜನರು ರಾಯಚೂರಿನಲ್ಲಿಯೂ ಹೋರಾಟಕ್ಕೆ ನಿರ್ಧರಿಸಿದ್ದು ಯುವಕರು, ವಿದ್ಯಾರ್ಥಿಗಳು ಬೆಂಬಲಿಸಬೇಕು ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ವಿಶ್ವನಾಥ ಬಲ್ಲಿದವ, ಪ್ರವೀಣಕುಮಾರ, ಮೋಹನ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net