ಆ.10 ರಂದು ರಾಷ್ಟ್ರವ್ಯಾಪ್ತಿ ಮುಷ್ಕರ

ಜಿ.ಅಡವಿರಾವ್
ಜಿ.ಅಡವಿರಾವ್
Published on

ಕೇಂದ್ರ ಕಾರ್ಮಿಕ ಸಂಘಟನೆಗಳು, ಸಂಯುಕ್ತ ಕಿಸಾನ್ ಮೋರ್ಚಾ ನೀಡಿರುವ ರಾಷ್ಟ್ರವ್ಯಾಪ್ತಿ ಮುಷ್ಕರ ಬೆಂಬಲಿಸಿ ಆ.10 ರಂದು ನಗರದಲ್ಲಿ ರ‌್ಯಾಲಿ ನಡೆಸಲು ನಿರ್ಧರ ಮಾಡಲಾಗಿದೆಂದು ಟಿಯುಸಿಐ ಜಿಲ್ಲಾಧ್ಯಕ್ಷ ಜಿ.ಅಡವಿರಾವ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕನಿಷ್ಟ ವೇತನ ಕಾಯ್ದೆ ಜಾರಿಗೊಳಿಸುವುದು, ಹೊರಗುತ್ತಿಗೆ ನೌಕರರಿಗೆ ಉದ್ಯೋಗ ಭದ್ರತೆ ಒದಗಿಸಿ ಕನಿಷ್ಟ 35 ಸಾವಿರ ರೂ ವೇತನ ನಿಗಧಿಪಡಿಸುವದು, ಕೃಷಿ, ವಿದ್ಯುತ್ ಕ್ಷೇತ್ರ ಖಾಸಗೀಕರಣ ವಿರೋಧಿಸಿ ನಡೆಯುವ ಹೋರಾಟದಲ್ಲಿ ಟಿಯುಸಿಐ ಅಡಿ ಸಂಯೋಜಿತ ಸಂಘಟನೆಗಳು ಭಾಗವಹಿಸಲಿವೆ ಎಂದರು.
ಅಂದು ನಗರದ ಡಾ.ಬಿ.ಆರ್.ಆಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ರ‌್ಯಾಲಿಯು ನಗರದ ವಿವಿಧ ರಸ್ತೆಗಳ ಮೂಲಕ ಟಿಪ್ಪುಸುಲ್ತಾನ ಗಾರ್ಡನ್‌ಗೆ ತೆರಳಿ ಬಹಿರಂಗ ಸಭೆಯಾಗಿ ಮಾರ್ಪಡಲಿದೆ. ಕಾರ್ಮಿಕರು, ರೈತ ಮುಖಂಡರುಗಳು ಪ್ರತಿಭಟನೆ ಉದ್ದೇಶಿಸ ಮಾತನಾಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯ ಕಟ್ಟಿಮನಿ, ತಿಪ್ಪರಾಜ, ರಾಮಕೃಷ್ಣ, ನಿರಂಜನ, ಬಸವರಾಜ, ಮಲ್ಲೇಶ ಹಟ್ಟಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net