ಸೆ.16ರಿಂದ ರಾಷ್ಟ್ರೀಯ ಮಹಾಧಿವೇಶನ

ಎಚ್.ಎನ್.ಬಡಿಗೇರ್
ಎಚ್.ಎನ್.ಬಡಿಗೇರ್
Published on

ಪ್ರಮುಖ ಮುಖ್ಯಾಂಶಗಳು

  • ಸ್ವಾಗತ ಸಮಿತಿ ಉಪಾಧ್ಯಕ್ಷ ಎಚ್.ಎನ್.ಬಡಿಗೇರ್ ಮಾಹಿತಿ
  • ಸಿಂಧನೂರು ಸಿಪಿಐ(ಎಂಎಲ್) ರೆಡ್‌ಸ್ಟಾರ್ ಮಹಾಧಿವೇಶನ
ಸಿಂಧನೂರು: ರಾಯಚೂರಿನ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಸೆ.16ರಿಂದ 20ರವರೆಗೆ ಸಿಪಿಐ(ಎಂಎಲ್) ರೆಡ್‌ಸ್ಟಾರ್ 13ನೇ ರಾಷ್ಟ್ರೀಯ ಮಹಾಧಿವೇಶನ ನಡೆಯಲಿದೆ ಎಂದು ಮಹಾಧಿವೇಶನ ಸ್ವಾಗತ ಸಮಿತಿ ಉಪಾಧ್ಯಕ್ಷ ಎಚ್.ಎನ್.ಬಡಿಗೇರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂಲಭೂತವಾದ, ಜಾತಿ ವ್ಯವಸ್ಥೆ, ಸಾಮ್ರಾಜ್ಯಶಾಹಿ ದೌರ್ಜನ್ಯದ ವಿರುದ್ಧ ಪರ್ಯಾಯ ಜನಪರ ರಾಜಕೀಯವನ್ನು ಬಲಪಡಿಸುವ ಉದ್ದೇಶದಿಂದ ಮಹಾಧಿವೇಶನ ಆಯೋಜಿಸಲಾಗಿದೆ. 62 ದೇಶಗಳ ಕಮ್ಯೂನಿಸ್ಟ್ ಪಕ್ಷಗಳ ಪ್ರತಿನಿಧಿಗಳನ್ನು ಆಹ್ವಾನಿಸಲಾಗಿದ್ದು, ವಿವಿಧ ರಾಜ್ಯಗಳಿಂದ 300ಕ್ಕೂ ಹೆಚ್ಚು ಪಕ್ಷದ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ರಾಜ್ಯ ಕಾರ್ಯದರ್ಶಿ ಹಾಗೂ ಸಂಚಾಲಕ ಎಂ.ಗಂಗಾಧರ್ ಮಾತನಾಡಿ, ಮಹಾಧಿವೇಶನದಲ್ಲಿ ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ವಿಚಾರ ಸಂಕಿರಣಗಳು ನಡೆಯಲಿದ್ದು, ರೈತ-ಕಾರ್ಮಿಕ, ದಲಿತ, ಮಹಿಳಾ, ಆದಿವಾಸಿ, ವಿದ್ಯಾರ್ಥಿಯುವಜನ ಮತ್ತು ಪ್ರಜಾಸತ್ತಾತ್ಮಕ ಚಳವಳಿಗಳ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.
ಮಹಾಧಿವೇಶನ ಕರಪತ್ರ ಬಿಡುಗಡೆಗೊಳಿಸಲಾಯಿತು. ಹೋರಾಟಗಾರ ನಾರಾಯಣ ಬೆಳಗುರ್ಕಿ, ತಾಲೂಕು ಕಾರ್ಯದರ್ಶಿ ಮಾಬುಸಾಬ್ ಬೆಳ್ಳಟ್ಟಿ, ಎಚ್.ಆರ್.ಹೊಸಮನಿ, ತಿಮ್ಮಣ್ಣ ಯಾದವ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net