ನೂತನ ಅಧ್ಯಕ್ಷರಾಗಿ ಎನ್.ಶಿವಶಂಕರ ಆಯ್ಕೆ

ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರ ಆಯ್ಕೆಗಾಗಿ ಗುರುವಾರ ನಡೆದ ಚುನಾವಣೆಯಲ್ಲಿ ಎನ್. ಶಿವಶಂಕರ ಅಧ್ಯಕ್ಷರಾಗಿ ಗೆಲುವು ದಾಖಲಿಸಿದ್ದಾರೆ.
ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರ ಆಯ್ಕೆಗಾಗಿ ಗುರುವಾರ ನಡೆದ ಚುನಾವಣೆಯಲ್ಲಿ ಎನ್. ಶಿವಶಂಕರ ಅಧ್ಯಕ್ಷರಾಗಿ ಗೆಲುವು ದಾಖಲಿಸಿದ್ದಾರೆ.
Published on

ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರ ಆಯ್ಕೆಗಾಗಿ ಗುರುವಾರ ನಡೆದ ಚುನಾವಣೆಯಲ್ಲಿ ಎನ್. ಶಿವಶಂಕರ ಅಧ್ಯಕ್ಷರಾಗಿ ಗೆಲುವು ದಾಖಲಿಸಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಿವ ಶಂಕರ 300 ಮತಗಳು, ಎಂ.ಜಗದೀಶ 226, ಎನ್. ಭಾನುರಾಜ 135 ಹಾಗೂ ಹುಸೇನ ಪಾಷಾ 12 ಮತಗಳನ್ನು ಪಡೆದರು.
ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಐವರು ಕಣದಲ್ಲಿದ್ದರು. ಆರ್. ಗೌಸ್ ಪಾಷಾ 202 ಮತಗಳಿಸಿ ಆಯ್ಕೆಯಾದರು. ಚಂದ್ರಕಾಂತ 99, ಜಿ.ಟಿ. ರೆಡ್ಡಿ 110, ಮಹಾದೇವ 71 ಹಾಗೂ ವೀರಗುಂಡಯ್ಯಸ್ವಾಮಿ 191 ಮತ ಪಡೆದರು.
ಮಹಿಳಾ ಉಪಾಧ್ಯಕ್ಷ ಸ್ಥಾನಕ್ಕೆ ಭಾರತಿ.ಜಿ. 359 ಮತ ಪಡೆದು ಜಯಗಳಿಸಿದರು. ಶಾಂತಕುಮಾರಿ 317 ಮತ ಗಳಿಸಿದರು. 42 ಮತಗಳ ಅಂತರದಲ್ಲಿ ಭಾರತಿ.ಜಿ. ಗೆಲುವು ಸಾಧಿಸಿದರು.

ಇನ್ನು ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಮುನಿಯಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣೆಯ ಫಲಿತಾಂಶವನ್ನು ಜಿಲ್ಲಾ ಚುನಾವಣಾಧಿಕಾರಿ ಶಂಕರ ಪಾಟೀಲ್ ಹಾಗೂ ಎ. ಶ್ರೀನಿವಾಸ ಅಧಿಕೃತವಾಗಿ ಘೋಷಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net