ಪುರಾಣಗಳು ಸತ್ಕರ್ಮಗಳಿಗೆ ಪ್ರೇರಣೆ

ಅರಕೇರಾ ತಾಲೂಕಿನ ನೀಲಗಲ್ ಗ್ರಾಮದ ಶ್ರೀ ಶಾಂಭವಿ ಶಾಂತಮಲ್ಲೇಶ್ವರ ಬೃಹನ್ಮಠದಲ್ಲಿ ಹಮ್ಮಿಕೊಂಡಿದ್ದ ಶಿವಶರಣೆ ಹೇಮರೆಡ್ಡಿ ಮಲಮ್ಮನವರ ಪುರಾಣ ಕಾರ್ಯಕ್ರಮಕ್ಕೆ ನಾಲವಾರದ ಡಾ.ಕೋರಿಸಿದ್ಧೇಶ್ವರ ಶಿವಾಚಾರ್ಯರು ಭಾನುವಾರ ಚಾಲನೆ ನೀಡಿದರು.
ಅರಕೇರಾ ತಾಲೂಕಿನ ನೀಲಗಲ್ ಗ್ರಾಮದ ಶ್ರೀ ಶಾಂಭವಿ ಶಾಂತಮಲ್ಲೇಶ್ವರ ಬೃಹನ್ಮಠದಲ್ಲಿ ಹಮ್ಮಿಕೊಂಡಿದ್ದ ಶಿವಶರಣೆ ಹೇಮರೆಡ್ಡಿ ಮಲಮ್ಮನವರ ಪುರಾಣ ಕಾರ್ಯಕ್ರಮಕ್ಕೆ ನಾಲವಾರದ ಡಾ.ಕೋರಿಸಿದ್ಧೇಶ್ವರ ಶಿವಾಚಾರ್ಯರು ಭಾನುವಾರ ಚಾಲನೆ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • *ನಾಲವಾರದ ಡಾ.ಕೋರಿಸಿದ್ಧೇಶ್ವರ ಶಿವಾಚಾರ್ಯರ ಅನಿಸಿಕೆ
ಅರಕೇರಾ: ಪುರಾಣಗಳು ಮಾನವನ ಬದುಕಿಗೆ ದಾರಿದೀಪವಾಗಿವೆ. ಪುರಾಣಗಳಲ್ಲಿ ಅಡಗಿರುವ ಪುಣ್ಯಕಥೆಗಳನ್ನು ಶ್ರದ್ಧೆಯಿಂದ ಆಲಿಸಿದರೆ ಮನುಷ್ಯನ ಬದುಕು ಹಸನಾಗುತ್ತದೆ ಎಂದು ನಾಲವಾರದ ಡಾ.ಕೋರಿಸಿದ್ಧೇಶ್ವರ ಶಿವಾಚಾರ್ಯರು ಹೇಳಿದರು. 
ತಾಲೂಕಿನ ನೀಲಗಲ್ ಗ್ರಾಮದ ಶ್ರೀ ಶಾಂಭವಿ ಶಾಂತಮಲ್ಲೇಶ್ವರ ಬೃಹನ್ಮಠದ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಪುರಾಣ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು. ಪುರಾಣ ಪ್ರವಚನಗಳಿಂದ ದೇವರ ಮಹಿಮೆ, ಶಿವಶರಣರ ಸತ್ಯ ದರ್ಶನವಾಗುತ್ತದೆ. ಮಾನಸಿಕ ಶಾಂತಿ, ಧಾರ್ಮಿಕ ಚಿಂತನೆ ಹಾಗೂ ಸತ್ಕರ್ಮಗಳಿಗೆ ಪ್ರೇರಣೆ ದೊರೆಯುತ್ತದೆ ಎಂದರು. 
ಸಾನ್ನಿಧ್ಯ ವಹಿಸಿದ್ದ ನೀಲಗಲ್ ಬೃಹನ್ಮಠದ ಡಾ.ಪಂಚಾಕ್ಷರ ಶಿವಾಚಾರ್ಯರು ಮಾತನಾಡಿ, ಸಮಾಜದಲ್ಲಿ ಧಾರ್ಮಿಕ ಸಂಸ್ಕಾರ, ಸೌಹಾರ್ದತೆ ಹಾಗೂ ನೈತಿಕ ಮೌಲ್ಯಗಳನ್ನು ಬಲಪಡಿಸುವಲ್ಲಿ ಜಾತ್ರೋತ್ಸವ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.  ಜ.4 ರಿಂದ ಜ.13 ರವರೆಗೆ ನಡೆಯು ಜಾತ್ರೋತ್ಸವ ನಿಮಿತ್ತ ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳಿಗೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು. ಮಹಾ ಚಂಡಿಕಾ ಯಾಗ ನಡೆಯಿತು. ಅಪಾರ ಭಕ್ತರು ಭಾಗವಹಿಸಿದ್ದರು. 
ಅಭಿನವ ರೇಣುಕ ಶಾಂತಮಲ್ಲ ಶಿವಾಚಾರ್ಯರು, ಮಾನ್ವಿ ಕಲ್ಮಠದ ವಿರೂಪಾಕ್ಷ ಪಂಡಿತರಾಧ್ಯ ಶಿವಾಚಾರ್ಯರು, ಸುಲ್ತಾನಪುರದ ಶಂಭು ಸೋಮನಾಥ ಶಿವಾಚಾರ್ಯರು, ಚಟ್ನಳ್ಳಿಯ ವಿಶ್ವಾರಾಧ್ಯ ದೇವರು, ಲೋಕಾಪುರದ ಶ್ರೀ ಮಹಾಂತ ದೇವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net