ರಥದ ಪ್ರತಿಕೃತಿ ನಿರ್ಮಿಸಿದ ಮುಸ್ಲಿಂ ಯುವಕ

ಗುರುಗುಂಟಾದ ಮುಸ್ಲಿಂ ಯುವಕ ಯಿಲಾಯಿದ್ದೀನ್ ನಿರ್ಮಿಸಿದ ಶ್ರೀ ಅಮರೇಶ್ವರ ರಥದ ಪ್ರತಿಕೃತಿ.
ಗುರುಗುಂಟಾದ ಮುಸ್ಲಿಂ ಯುವಕ ಯಿಲಾಯಿದ್ದೀನ್ ನಿರ್ಮಿಸಿದ ಶ್ರೀ ಅಮರೇಶ್ವರ ರಥದ ಪ್ರತಿಕೃತಿ.
Published on

ಪ್ರಮುಖ ಮುಖ್ಯಾಂಶಗಳು

  • ಮುಸ್ಲಿಂ ಯುವಕ

ರಥದ ಪ್ರತಿಕೃತಿ ನಿರ್ಮಿಸಿದ ಮುಸ್ಲಿಂ ಯುವಕ

ಗುರುಗುಂಟಾ: ಇಲ್ಲಿನ ಮುಸ್ಲಿಂ ಸಮುದಾಯದ ಯುವ ಕಲಾವಿದ ಯಿಲಾಯಿದ್ದೀನ್ ನಗಾರಿ ಕಾಷ್ಠಶಿಲ್ಪದ ಕಲಾಕೃತಿಯಲ್ಲಿ ಮಾಡಿದ ಅಮರೇಶ್ವರ ದೇವರ ರಥವನ್ನು ಹೋಲುವ ಚಿಕ್ಕ ತೇರು (ಪ್ರತಿಕೃತಿ) ನಿರ್ಮಿಸಿ ಗಮನ ಸೆಳೆದಿದ್ದಾನೆ.
ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಲ್ಯಾಬ್ ಟೆಕ್ನೀಷಿಯನ್ ಕೆಲಸ ನಿರ್ವಹಿಸುತ್ತಿದ್ದು, ಅಮರೇಶ್ವರ ಜಾತ್ರೆಯಲ್ಲಿ ತೇರು ನೋಡಿ ಇದೇ ಮಾದರಿಯ ಚಿಕ್ಕ ತೇರು ಮಾಡಬೇಕೆಂಬ ಸಂಕಲ್ಪ ತೊಟ್ಟು 1 ವರ್ಷದಲ್ಲಿ ಕಟ್ಟಿಗೆಯ 4 ಅಡಿ ಎತ್ತರ 2 ಅಡಿ ಅಗಲದ 40-50 ಕೆಜಿ ತೂಕದ ತೇರು ನಿರ್ಮಿಸಿದ್ದಾರೆ.
ಪೇಂಟಿಂಗ್, ಕಟ್ಟಿಗೆ, ಥರ್ಮಾಕೋಲ್‌ನಲ್ಲಿ ಕಲಾಕೃತಿ ರಚಿಸಿದ್ದಾರೆ. ಕೋಲಂಬಿಯಾ ದೇಶದಲ್ಲಿ ಕಲಾಕೃತಿ ಪ್ರದರ್ಶಿಸಿ ಅವಾರ್ಡ್ ಪಡೆದಿದ್ದಾರೆ. ಮಂಗಳವಾರ ಅಮರೇಶ್ವರ ಗುರುಗಳಾದ ಗಜದಂಡ ಶಿವಾಚಾರ್ಯರ ಸಮಕ್ಷಮದಲ್ಲಿ ರಥವನ್ನು ದೇವಸ್ಥಾನಕ್ಕೆ ಅರ್ಪಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net