ಮುದಗಲ್ ಕೋಟೆ ಶುಚಿತ್ವ ನಿರ್ಲಕ್ಷೃ

ಮುದಗಲ್ ಪಟ್ಟಣದ ಐತಿಹಾಸಿಕ ಎರಡು ಸುತ್ತಿನ ಕೋಟೆಯನ್ನು ಮೈಸೂರು ಪ್ರಾಚ್ಯವಸ್ತು ಇಲಾಖೆ ಆಯುಕ್ತ ದೇವರಾಜು ನೇತೃತ್ವದ ತಂಡ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು. ಪ್ರಾಚ್ಯವಸ್ತು ಇಲಾಖೆ ನಿರ್ದೇಶಕ ಶೈಲೇಶ್ವರ್ ಆರ್., ಇಲಾಖೆ ಎಇಇಗಳಾದ ಸತೀಶ್, ಪ್ರೇಮಲತಾ, ಡಿಡಿ ಮಂಜುಳಾ ಸಿ.ಎನ್., ಶಿವಪ್ರಕಾಶ್ ರಾಯಚೂರು, ಕೋಟೆ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಅಶೋಕ್ ಗೌಡ ಪಾಟೀಲ್, ಪುರಸಭೆಯ ಮುಖ್ಯಾಧಿಕಾರಿ ಪ್ರವೀಣ್ ಭೋಗಾರ್ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಮುದಗಲ್ ಕೋಟೆ
  • ಶುಚಿತ್ವ ನಿರ್ಲಕ್ಷೃ
ಮುದಗಲ್ ಕೋಟೆ ಶುಚಿತ್ವ ನಿರ್ಲಕ್ಷೃ

- ಪುರಾತತ್ವ ಇಲಾಖೆ ಆಯುಕ್ತ ಎ.ದೇವರಾಜು ಅಸಮಾಧಾನ

ಮುದಗಲ್: ಇಲ್ಲಿನ ಐತಿಹಾಸಿಕ ಎರಡು ಸುತ್ತಿನ ಕೋಟೆ ನೋಡಲು ಸುಂದರವಾಗಿದೆ. ಆದರೆ, ಸಾರ್ವಜನಿಕರ ನಿಷ್ಕಾಳಜಿ, ಜನಪ್ರತಿನಿಧಿಗಳ ನಿರ್ಲಕ್ಷೃದಿಂದ ನಿರ್ವಹಣೆ ಕೊರತೆ ಎದುರಿಸುತ್ತಿದೆ ಎಂದು ಪುರಾತತ್ವ ಇಲಾಖೆ ಆಯುಕ್ತ ಎ.ದೇವರಾಜು ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಐತಿಹಾಸಿಕ ಎರಡು ಸುತ್ತಿನ ಕೋಟೆಗೆ ಬುಧವಾರ ಪುರಾತತ್ವ ಇಲಾಖೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ, ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಪುರಾತನ ಕಾಲದ ತೋಪುಗಳು, ಶಿಲಾ ಶಾಸನಗಳು ಹಾಗೂ ಸ್ಮಾರಕಗಳು ಮತ್ತು ಕೋಟೆಯ ಒಳಭಾಗ ಶಿಥಿಲಾವಸ್ಥೆ ತಲುಪಿದ್ದು, ಸ್ವಚ್ಛತೆ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವಿಶ್ವ ಪರಂಪರೆ ಸಪ್ತಾಹ: ಇದೇ 19 ರಿಂದ 25 ರವರೆಗೆ ವಿಶ್ವ ಪರಂಪರೆ ಸಪ್ತಾಹ ನಿಮಿತ್ತ ಎರಡು ಸುತ್ತಿನ ಕೋಟೆ ಸ್ವಚ್ಛತೆಗೆ ಒಂದು ದಿನ ನಿಗದಿಗೊಳಿಸಿ ಪಟ್ಟಣದ ಮಹಾಜನತೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಸಹಕರಿಸಬೇಕು. ಜಿಲ್ಲಾಡಳಿತ, ಸ್ಥಳೀಯ ಪುರಸಭೆ, ತಾಲೂಕು ಆಡಳಿತ ಮತ್ತು ಚುನಾಯಿತ ಜನಪ್ರತಿನಿಧಿಗಳು ಕೂಡ ಭಾಗಿಯಾಗಲಿದ್ದು, ಪ್ರಗತಿಪರ ಸಂಘಟನೆಗಳು ಮತ್ತು ಸಾಹಿತಿಗಳು ಇತಿಹಾಸ ತಜ್ಞರು, ಶಾಲಾ-ಕಾಲೇಜು ವಿದ್ಯಾಥಿಗಳು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ನೋಟಿಸ್ ನೀಡಿ: ಐತಿಹಾಸಿಕ ಕೋಟೆ ವ್ಯಾಪ್ತಿಯ ಸ್ಮಾರಕಗಳು ಹಾಗೂ ಶಿಲಾಶಾಸನಗಳ ವಿರೂಪಗೊಳಿಸುವ ಪ್ರಯತ್ನ ನಡೆಸುವವರಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ಒಂದು ವರ್ಷ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ ದೇವರಾಜು ಅವರು, ಕೋಟೆಯ ಸುತ್ತಲೂ ಅತಿಕ್ರಮಣ ಮಾಡಿದವರಿಗೆ ನೋಟಿಸ್ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ ಕೋಟೆ ಒಳಭಾಗದಲ್ಲಿ ಬಹಿರ್ದೆಸೆಗೆ ತೆರಳುವವರಿಗೆ ನೋಟಿಸ್ ನೀಡಿ, ದಂಡ ವಿಧಿಸಬೇಕು. ಐತಿಹಾಸಿಕ ತಾಣದ ಸ್ವಚ್ಛತೆಗೆ ಎಲ್ಲರೂ ಆದ್ಯತೆ ನೀಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಪ್ರವೀಣ ಭೋಗಾರ್‌ಗೆ ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net