ಸಾರ್ವಜನಿಕ ಗ್ರಂಥಾಲಯ ಸ್ಥಳಾಂತರಿಸಿ

ಸಿರವಾರದಲ್ಲಿ ಪಪಂ ಉದ್ಯೋಗಿಗಳಾದ ಹಂಪಯ್ಯ, ಚಾಂದ್‌ಸಾಬ್‌ಗೆ ಶ್ರೀರಾಮ ಸೇನೆ ಕಾರ್ಯಕರ್ತರು ಮನವಿ ಸಲ್ಲಿಸಿದರು.   ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಂಬು ನಾಯಕ, ತಾಲೂಕು ಅಧ್ಯಕ್ಷ ವೀರೇಶ ಹೂಗಾರ್, ಪಿ. ಗುರುಕಿರಣ ಶೆಟ್ಟಿ ಇತರರಿದ್ದರು.
ಸಿರವಾರದಲ್ಲಿ ಪಪಂ ಉದ್ಯೋಗಿಗಳಾದ ಹಂಪಯ್ಯ, ಚಾಂದ್‌ಸಾಬ್‌ಗೆ ಶ್ರೀರಾಮ ಸೇನೆ ಕಾರ್ಯಕರ್ತರು ಮನವಿ ಸಲ್ಲಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಂಬು ನಾಯಕ, ತಾಲೂಕು ಅಧ್ಯಕ್ಷ ವೀರೇಶ ಹೂಗಾರ್, ಪಿ. ಗುರುಕಿರಣ ಶೆಟ್ಟಿ ಇತರರಿದ್ದರು.
Published on
ಸಿರವಾರ: ಪಟ್ಟಣದಲ್ಲಿರುವ ಸಾರ್ವಜನಿಕ ಗ್ರಂಥಾಲಯವನ್ನು ಹಳೇ ಪಟ್ಟಣ ಪಂಚಾಯಿತಿ ಕಟ್ಟಡಕ್ಕೆ ಸ್ಥಳಾಂತರ ಮಾಡಬೇಕೆಂದು ಒತ್ತಾಯಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಶುಕ್ರವಾರ ಪಪಂ ಉದ್ಯೋಗಿಗಳಾದ ಹಂಪಯ್ಯ, ಚಾಂದ್‌ಸಾಬ್‌ಗೆ ಶುಕ್ರವಾರ ಮನವಿ ಸಲ್ಲಿಸಿದರು.
ಈಗಾಗಲೇ ವಿದ್ಯಾನಗರ ಸರ್ಕಾರಿ ಶಾಲೆಯ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ. ಅಲ್ಲಿ ಓದುಗರಿಗೆ ಅನುಕೂಲವಾಗಿಲ್ಲ. ಸಿರವಾರ ತಾಲೂಕು ಕೇಂದ್ರವಾಗಿರುವುದರಿಂದ ನಿತ್ಯ ಅನೇಕ ಹಳ್ಳಿಗಳಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಬರುತ್ತಾರೆ.
 ಆದ್ದರಿಂದ ವಿದ್ಯಾನಗರ ಶಾಲೆಯ ಆವರಣದಲ್ಲಿರುವ ಗ್ರಂಥಾಲಯವನ್ನು ಹಳೇ ಪಟ್ಟಣ ಪಂಚಾಯಿತಿ ಕಟ್ಟಡಕ್ಕೆೆ ಸ್ಥಳಾಂತರ ಮಾಡಿದರೆ ಹೆಚ್ಚಿನ ಉಪಯೋಗವಾಗುತ್ತದೆ. ಆದ್ದರಿಂದ ಕೂಡಲೇ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿದರು.
 ಶ್ರೀರಾಮ ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಂಬು ನಾಯಕ, ಸಿರವಾರ ತಾಲೂಕು ಘಟಕದ ಅಧ್ಯಕ್ಷ ವೀರೇಶ ಹೂಗಾರ್, ಎಬಿವಿಪಿ ಜಿಲ್ಲಾ ಸಂಚಾಲಕ ಪಿ. ಗುರುಕಿರಣ ಶೆಟ್ಟಿ, ಸೂರಪ್ಪ ನಾಯಕ, ತ್ರಿಮೂರ್ತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net