ರಾಯಚೂರಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ಸುದೀಕ್ಷಾ ಪ್ರಕಾಶನದಿಂದ ಮಹಾಂತೇಶ ಬಿರಾದಾರ ’ಮೊಹಬ್ಬತಿನ ಮಹಲಿಗೂ ಬೆಂಕಿ’ ಚೊಚ್ಚಲ ಕೃತಿಯನ್ನು ಪ್ರಾಚಾರ್ಯ ಆರೀಫ್ ರಾಜಾ ಬಿಡುಗಡೆ ಮಾಡಿದರು. ಎಂಎಲ್ಸಿ ಶಶಿಲ್ ನಮೋಶಿ, ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಸಚಿವ ಡಾ.ಕೆ.ವೆಂಕಟೇಶ, ಕೃತಿ ಕರ್ತೃ ಮಹಾಂತೇಶ ಬಿರಾದಾರ,ಪ್ರಮುಖರಾದ ತಾಯರಾಜ ಮರ್ಚಟ್ಟಾಳ, ನಂದೀಶ ಬಂಡಿ, ಸಂತೋಷ,ನಂದಿನಿ ಇದ್ದರು.
ದೇಶದಲ್ಲಿ ಶೇ.60 ಮಹಿಳಾ ಶಿಕ್ಷಕಿಯರು ಕಾರ್ಯನಿರ್ವಹಸುತ್ತಾರೆ
ರಾಯಚೂರು ದೇಶದಲ್ಲಿ ಶೇ.60 ಮಹಿಳಾ ಶಿಕ್ಷಕಿಯರು ಕಾರ್ಯನಿರ್ವಹಿಸುತ್ತಿದ್ದು, ಸಾವಿತ್ರಿ ಬಾಯಿ ಫುಲೆಯವರ ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಮಹಿಳಾ ಶಿಕ್ಷಣ ನೀಡಲು ಪ್ರೇರಣೆಯಾಗಿದ್ದಾರೆಂದು ಎಂಎಲ್ಸಿ ಶಶಿಲ್ ನಮೋಶಿ ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ಸುದೀಕ್ಷಾ ಪ್ರಕಾಶನದಿಂದ ಮಹಾಂತೇಶ ಬಿರಾದಾರ ’ಮೊಹಬ್ಬತಿನ ಮಹಲಿಗೂ ಬೆಂಕಿ’ ಚೊಚ್ಚಲ ಕೃತಿ ಬಿಡುಗಡೆ, ಮಹಿಳಾ ದಿನಾಚರಣೆ, ಮಹಿಳಾ ಸಾಧಕಿ ಶಿಕ್ಷಕಿಯರಿಗೆ ವಿದ್ಯಾಧಾತೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಬಾಬು ಜಗಜೀವನರಾಂ ಜಯಂತಿಯ ದಿನದಂದು ಮಹಿಳಾ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿರುತ್ತಿರುವ ಶ್ಲಾಘನೀಯ ಕಾರ್ಯವಾಗಿದೆ. ಪ್ರಾಥಮಿಕ, ಪ್ರೌಢ, ದೈಹಿಕ ಶಿಕ್ಷಕಿಯರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಬೇಕೆಂದರು. ಶಿಕ್ಷಕರ ಸಂಘಗಳು ಬೇರೆ ಬೇರೆಯಾಗಿದ್ದರೂ ಸಮಸ್ಯೆಗಳು ಮಾತ್ರ ಒಂದೇ ಯಾಗಿವೆ. ಸರಿಯಾದ ಮಾರ್ಗದರ್ಶನದಲ್ಲಿ ಸಂಘ ಗಳು ಸಂಘಟಿತರಾಗಿ ಪರಿಹಾರ ಕಂಡುಕೊಳ್ಳ ಬೇಕಿದೆಂದು ತಿಳಿಸಿದರು.
ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಸಚಿವ ಡಾ.ಕೆ.ವೆಂಕಟೇಶ ಮಾತನಾಡಿ, ಕಾವ್ಯ ಕೇವಲ ಪ್ರೀತಿ, ಪ್ರೇಮ ಮಾತ್ರವಲ್ಲ, ಮಾನವಸಂಬಂಧಿತ ಭಾವನೆಗಳಿಗೂ ಧ್ವನಿಯಾಗುತ್ತದೆ. ಒಂದು ಕಡೆ ಯುದ್ದ, ಮತ್ತೊಂದು ಕಡೆ ಐಪಿಎಲ್ ಕ್ರಿಕೆಟ್ ಸಂಭ್ರಮ ಮತ್ತೊಂದು ಕಡೆ ಯುದ್ದದಿಂದ ಆಹಾರಕ್ಕಾಗಿ ಅಂಗಲಾಚುವ ಸ್ಥಿತಿ ಎದುರಿಸುತ್ತಿದ್ದು, ವರ್ತಮಾನದ ತಲ್ಲಣಗಳೊಂದಿಗೆ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಕಾವ್ಯ ಧ್ವನಿಯಾಗುತ್ತಿದೆ. ಸೈನಿಕನಂತೆಯೇ ಕಾವ್ಯವೂ ಎದುರಾದ ಸವಾಲುಗಳ ಬಯಲು ಮಾಡುವಂತಿದೆ. ಹಿರಿಯ ಕವಿ ಜಂಬಣ್ಣ ಅಮರಚಿಂತ ಕವನ ಸಾಲು ಉಲ್ಲೇಖಿಸಿ ವರ್ತಮಾನ ತಲ್ಲಣಗಳೊಂದಿಗೆ ಸಾಹಿತ್ಯ ಮುಖಾಮುಖಿಯಾಗಿದೆ ಎಂದರು.
ನಂತರ ಮಹಾಂತೇಶ ಬಿರಾದಾರ ಮೊಹಬ್ಬತಿನ ಮಹಲಿಗೂ ಬೆಂಕಿ ಕೃತಿಯನ್ನು ಇಲಕಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಆರೀಫ್ ರಾಜಾ ಬಿಡುಗಡೆಗೊಳಿಸಿದರು. ಪುಸ್ತಕವನ್ನು ಶರಣಬಸವ ಗುಡಿದಿನ್ನಿ ಪರಿಚಯಿಸಿದರು.
ಈ ಸಂದರ್ಭದಲ್ಲಿ ಕೃತಿ ಕರ್ತೃ ಮಹಾಂತೇಶ ಬಿರಾದಾರ,ಪ್ರಮುಖರಾದ ತಾಯರಾಜ ಮರ್ಚಟ್ಟಾಳ, ನಂದೀಶ ಬಂಡಿ, ಸಂತೋಷ, ನಂದಿನಿ ಸೇರಿ ಅನೇಕರು ಇದ್ದರು.