ಕವಿತಾಳ ಸಮೀಪದ ಹಿರೇದಿನ್ನಿಯ ಸರ್ಕಾರಿ ಹಿರಿಯ ಪಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಶಾಸಕ ಆರ್.ಬಸನಗೌಡ ಉದ್ಘಾಟಿದರು. ಇರಕಲ್ ಮಠದ ಬಸವಪ್ರಸಾದ ಸ್ವಾಮಿ, ಎಸ್‌ಡಿಎಮ್‌ಸಿ ಅಧ್ಯಕ್ಷೆ ಭಾಗ್ಯವಂತಿ ಅಮ್ಮ, ಶಿಕ್ಷಕ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ ಶಿಕ್ಷಕ, ಪ್ರಮುಖರಾದ ಪಂಪಾವತಿ, ಅರವಿಂದ, ಸುನೀತಾ ಕಳಕಪ್ಪ, ಯಲ್ಲಪ್ಪ ಅರಳಿಬಂಡಿ, ರೇಣುಕಾರಾಜ, ಹಂಪಯ್ಯ, ತಿಮ್ಮಪ್ಪ, ವಿಜಯಲಕ್ಷ್ಮೀ, ಪಿಎಸ್‌ಐ ಗುರುಚಂದ್ರ ಯಾದವ ಇತರರಿದ್ದರು.
ಕವಿತಾಳ: ಸರ್ಕಾರಿ ಶಾಲೆಗಳಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸುವ ಮೂಲಕ ವಿವಿಧ ಸ್ಕೂಲ್‌ಗಳಿಗೆ ಮಾದರಿಯಾಗಿದೆ ಎಂದು ಶಾಸಕ ಆರ್ ಬಸನಗೌಡ ತುರ್ವಿಹಾಳ ಹೇಳಿದರು.
ಸಮೀಪದ ಹಿರೇದಿನ್ನಿ ಸರ್ಕಾರಿ ಹಿರಿಯ ಪಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಲೂಕಿನಲ್ಲಿ ಹಿರೇದಿನ್ನಿ ಶಾಲೆಯು ಉತ್ತಮ ಶಾಲೆ ಪ್ರಸಿದ್ಧಿ ಪಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಂಸ್ಕೃತಿಕ ಮತ್ತು ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಇರಕಲ್ ಮಠದ ಬಸವಪ್ರಸಾದ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಎಸ್‌ಡಿಎಮ್‌ಸಿ ಅಧ್ಯಕ್ಷೆ ಭಾಗ್ಯವಂತಿ ಅಮ್ಮ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ, ಪ್ರಮುಖರಾದ ಪಂಪಾವತಿ, ಅರವಿಂದ, ಸುನೀತಾ ಕಳಕಪ್ಪ, ಯಲ್ಲಪ್ಪ ಅರಳಿಬಂಡಿ, ರೇಣುಕಾರಾಜ, ಹಂಪಯ್ಯ, ತಿಮ್ಮಪ್ಪ, ವಿಜಯಲಕ್ಷ್ಮೀ ಉಪಸ್ಥಿತರಿದ್ದರು.