ದೇವದುರ್ಗದಲ್ಲಿ ತಹಸೀಲ್ದಾರ್ ನಾಗಮ್ಮ ಕಟ್ಟಿಮನಿಗೆ ಹಿಂದುಳಿದ ವರ್ಗಗಳ ಒಕ್ಕೂಟ ಮನವಿ ಸಲ್ಲಿಸಿತು. ಅಧ್ಯಕ್ಷ ಶರಣಗೌಡ ಸುಂಕೇಶ್ವರಹಾಳ, ಪ್ರಧಾನ ಕಾರ್ಯದರ್ಶಿ ನರಸಣ್ಣ ನಿಲವಂಜಿ, ರಂಗಪ್ಪ ಮಡಿವಾಳ, ಬಲಭೀಮ ಹೂಗಾರ ಇತರರಿದ್ದರು.
Published on:
Copied
Follow Us
ದೇವದುರ್ಗ: ತಾಲೂಕಿನ ವೀರಶೈವ ಲಿಂಗಾಯತ ಬಣಜಿಗ ಸಮಾಜದ ಕೆಲವು ಗುತ್ತಿಗೆದಾರರು 2ಎ ಮೀಸಲಾತಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಅಂಥವರ 2ಎ ಜಾತಿ ಪ್ರಮಾಣ ಪತ್ರ ರದ್ದು ಪಡಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ನಾಗಮ್ಮ ಕಟ್ಟಿಮನಿಗೆ ತಾಲೂಕು ಹಿಂದುಳಿದ ಜಾತಿಗಳ ಒಕ್ಕೂಟದ ಪದಾಧಿಕಾರಿಗಳು ಶನಿವಾರ ಮನವಿ ಸಲ್ಲಿಸಿದರು.
3ಎ ಪ್ರವರ್ಗದಲ್ಲಿ ಬರುವ ಲಿಂಗಾಯತ ಬಣಜಿಗ ಜಾತಿಯ ಕೆಲವು ಗುತ್ತಿಗೆದಾರರು, 2ಎ ಕೆಟಗೆರಿಯಡಿ ಜಾತಿ ಪ್ರಮಾಣ ಪಡೆದು ವಂಚನೆ ಮಾಡಿರುವುದು ದೃಢಪಟ್ಟಿದೆ. ರಾಜ್ಯ ಸರ್ಕಾರ 2011ರಲ್ಲಿ ಬಣಜಿಗ ಜಾತಿಯನ್ನು ಶಿಕ್ಷಣಕ್ಕಾಗಿ ಪ್ರವರ್ಗ 2ಎ ಮತ್ತು ಉದ್ಯೋಗಕ್ಕಾಗಿ ಪ್ರವರ್ಗ 3ಎ ಪ್ರಮಾಣ ಪತ್ರ ನೀಡುವಂತೆ ಆದೇಶ ನೀಡಿತ್ತು. ಕೆಲ ಗುತ್ತಿಗೆದಾರರು 2ಎ ಮೀಸಲಾತಿ ಜಾತಿ ಪ್ರಮಾಣ ಪತ್ರ ಪಡೆದು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ತಾಲೂಕಿನ ಕೆಲ ಲಿಂಗಾಯತ ಬಣಜಿಗ ಸಮಾಜದವರು ಪ್ರವರ್ಗ 2ಎ ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದು, ರದ್ದುಮಾಡಿ ಕ್ರಿಮಿನಲ್ ಕೇಸ್ ಹಾಕಬೇಕೆಂದು ಎಂದು ಆಗ್ರಹಿಸಿದರು.
ಒಕ್ಕೂಟದ ತಾಲೂಕು ಅಧ್ಯಕ್ಷ ಶರಣಗೌಡ ಸುಂಕೇಶ್ವರಹಾಳ, ಪ್ರಧಾನ ಕಾರ್ಯದರ್ಶಿ ನರಸಣ್ಣ ನಿಲವಂಜಿ, ಮುಖಂಡರಾದ ರಂಗಪ್ಪ ಮಡಿವಾಳ, ಬಲಭೀಮ ಹೂಗಾರ, ಮಲ್ಲಪ್ಪ ವಿಶ್ವಕರ್ಮ, ವಿಶ್ವಕರ್ಮ ಸಮಾಜದ ಅಧ್ಯಕ್ಷ ರಮೇಶ ಪತ್ತಾರ, ಚಿತ್ರಶೇಖರ ಮಲದಕಲ್, ಮಲ್ಲಿಕಾರ್ಜುನ ಕರಿಗಾರ ಗಬ್ಬೂರು, ಅಯ್ಯನಗೌಡ ದಿವಳಗುಡ್ಡ ಇತರರಿದ್ದರು.