ಲಿಂಗಸುಗೂರು: ತಾಲೂಕು ಹಿಂದುಳಿದ ವರ್ಗಗಳ ಒಕ್ಕೂಟದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆಗೆ ನ.28 ರಂದು ಪಟ್ಟಣದ ಬಲಭೀಮ ಹೋಟೆಲ್ ಸಭಾಂಗಣದಲ್ಲಿ ಸಭೆ ಕರೆಯಲಾಗಿದೆ ಎಂದು ಒಕ್ಕೂಟದ ತಾಲೂಕು ಪ್ರಧಾನ ಕಾರ್ಯದರ್ಶಿ ಪರಮೇಶ ಯಾದವ ಹೇಳಿದರು. ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದ ಸಮರ್ಥ ಅಧ್ಯಕ್ಷರು, ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕಿದೆ. ಈಗಾಗಲೇ ಒಕ್ಕೂಟ ಆರಂಭವಾಗಿ 5 ವರ್ಷ ಗತಿಸಿದೆ. ಹಿಂದುಳಿದ ವರ್ಗಗಳ ಸಂಘಟನೆ ಮಾಡಬೇಕಿದೆ. ಸರ್ಕಾರದ ಯೋಜನೆಗಳನ್ನು ಸಮಾಜದವರಿಗೆ ತಲುಪಿಸುವ ಅಗತ್ಯವಿದೆ. ಹಿಂದುಳಿದ ವರ್ಗದ ಮುಖಂಡರು ಪಾಲ್ಗೊಳ್ಳಬೇಕು ಎಂದು ಕೋರಿದರು. ಪ್ರಮುಖರಾದ ಅಮರೇಶ ಕಲ್ಲೂರು, ಉಗ್ರ ನರಸಿಂಹ, ಯಂಕೋಬ ಪವಾಡೆ, ಮಂಜುನಾಥ ಗುತ್ತೇದಾರ, ತಮ್ಮಣ್ಣ ಗುತ್ತೇದಾರ, ಚಂದ್ರಕಾಂತ ಬೋಗಂ ಇತರರಿದ್ದರು.