ಪಕ್ಷಾತೀತ ಹೋರಾಟ ರೂಪಿಸಲು ಜ.8ರಂದು ಸಭೆ

ಡಾ.ಬಿ.ಎನ್.ಪಾಟೀಲ್
ಡಾ.ಬಿ.ಎನ್.ಪಾಟೀಲ್
Published on

ಪ್ರಮುಖ ಮುಖ್ಯಾಂಶಗಳು

  • ಐಎಂಎ ತಾಲೂಕು ಅಧ್ಯಕ್ಷ ಡಾ.ಬಿ.ಎನ್.ಪಾಟೀಲ್ ಹೇಳಿಕೆ
ಸಿಂಧನೂರು: ಸಿಂಧನೂರು ಜಿಲ್ಲೆ ರಚನೆ ಕುರಿತಂತೆ ಹೋರಾಟ ರೂಪಿಸಲು ನಗರದ ಟೌನ್‌ಹಾಲ್‌ನಲ್ಲಿ ಜ.8ರಂದು ಬೆಳಗ್ಗೆ 11 ಗಂಟೆಗೆ ಪಕ್ಷಾತೀತ ಸಭೆಯನ್ನು ಕರೆಯಲಾಗಿದೆ ಎಂದು ಐಎಂಎ ತಾಲೂಕು ಅಧ್ಯಕ್ಷ ಡಾ.ಬಿ.ಎನ್.ಪಾಟೀಲ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಿಂಧನೂರು ಸುತ್ತಲಿನ ಪ್ರದೇಶಗಳಿಗೆ ಕೇಂದ್ರ ಸ್ಥಾನವಾಗಿದ್ದು, ಸಾರಿಗೆ-ಸಂಪರ್ಕ-ಸಂವಹನಕ್ಕೆ ಬಹಳಷ್ಟು ಅನುಕೂಲತೆಯನ್ನು ಹೊಂದಿದೆ. 
ಸಿಂಧನೂರು, ಲಿಂಗಸುಗೂರು, ಮಸ್ಕಿ ಸೇರಿದಂತೆ ಸಮೀಪದ ತಾಲೂಕುಗಳನ್ನು ಒಳಗೊಂಡು ಜಿಲ್ಲೆ ರಚಿಸಿದರೆ ಅಭಿವೃದ್ಧಿ ಕಾರ್ಯಗಳು ಸುಗಮವಾಗಲಿವೆ. ಈ ನಿಟ್ಟಿನಲ್ಲಿ ಸಿಂಧನೂರು ಜಿಲ್ಲಾ ಕೇಂದ್ರವಾದರೆ ಜನಸಾಮಾನ್ಯರು ಸೇರಿದಂತೆ ಆಡಳಿತಕ್ಕೆ ಹೇಗೆ ಅನುಕೂಲವಾಗಲಿದೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕಿದೆ ತಿಳಿಸಿದರು. 
ಪಕ್ಷಾತೀತ ಹೋರಾಟ ರೂಪಿಸುವ ಹಿನ್ನೆಲೆಯಲ್ಲಿ ಅಂದು ಕರೆದಿರುವ ಬೃಹತ್ ಸಭೆಯಲ್ಲಿ ಎಲ್ಲ ಸಂಘ-ಸಂಸ್ಥೆಗಳವರು, ಧಾರ್ಮಿಕ ಮುಖಂಡರು, ರಾಜಕೀಯ ಮುಖಂಡರು, ಯುವ ಮುಖಂಡರು, ಜನಪ್ರತಿನಿಧಿಗಳು ಹಾಗೂ ವಿದ್ಯಾರ್ಥಿ ಯುವಜನರು, ಮಹಿಳೆಯರು ಭಾಗವಹಿಸಿ ಸಲಹೆ ನೀಡಬೇಕು ಎಂದ ಬಿ.ಎನ್.ಪಾಟೀಲ್ ಅವರು, ಜನಾಭಿಪ್ರಾಯದ ಸಂಗ್ರಹದ ಮೂಲಕ ಜಿಲ್ಲಾ ರಚನೆ ಹೋರಾಟದ ಕುರಿತು ರೂಪು-ರೇಷೆ ತಯಾರಿಸಲಾಗುವುದು. ಅಂದು ಹೋರಾಟ ಸಮಿತಿ ರಚಿಸಲಾಗುವುದು ಎಂದರು.
ಸಿಂಧನೂರು ನಗರಕ್ಕೆ ತಾವರಗೇರಾ, ಕಾರಟಗಿ ಪಟ್ಟಣಗಳು ಸಮೀಪದಲ್ಲಿವೆ. ಅಲ್ಲಿ ಜನರನ್ನೂ ಜಿಲ್ಲಾ ರಚನೆ ಕುರಿತಂತೆ ಸಂಪರ್ಕಿಸಬಹುದಾಗಿದೆ. ಅವರೂ ಸಹ ಕೈಜೋಡಿಸುವ ಸಾಧ್ಯತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳವರು, ರಾಜಕೀಯ ಮುಖಂಡರು, ಕನ್ನಡಪರ ಸಂಘಟನೆಗಳು, ಜನಪರ ಸಂಘಟನೆಗಳು, ವೃತ್ತಿಪರ ಸಂಘಟನೆಗಳು ಜವಾಬ್ದಾರಿಯನ್ನು ವಹಿಸಿಕೊಂಡು ಜಿಲ್ಲಾ ರಚನೆಗೆ ಶ್ರಮಿಸಬೇಕಿದೆ ಎಂದು ಮನವಿ ಮಾಡಿದರು.
ಸುಡಾ ಸದಸ್ಯ ವೈ.ನರೇಂದ್ರನಾಥ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಕೆ.ಭೀಮನಗೌಡ, ಜಮಾಅತೆ ಇಸ್ಲಾಮಿ ಹಿಂದ್‌ನ ಅಧ್ಯಕ್ಷ ಹುಸೇನ್‌ಸಾಬ್, ಎಚ್.ಎಫ್.ಮಸ್ಕಿ, ದಾವಲ್‌ಸಾಬ್ ದೊಡ್ಮನಿ, ಸುರೇಶ ಗೊಬ್ಬರಕಲ್ ಇದ್ದರು.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net