ರಸ್ತೆಯ ಪಕ್ಕದಲ್ಲಿ ಬಿದ್ದಿರುವ ಎಲ್ಲಾ ಔಷಧಿ, ಸಿರೆಂಜ್‌ಗಳ ಎಕ್ಷಪಯರಿ ಡೇಟ್ ಇನ್ನು ಒಂದು ವರ್ಷಯಿದೆ. ಆದರು ಈ ಔಷಧಿಗಳನ್ನು ಯಾಕೆ ಬೀಸಾಡಿದ್ದಾರೆ ಅನ್ನೋದು ಗೊಂದಲಕ್ಕೆ ಕಾರಣವಾಗಿದೆ. ಮಕ್ಕಳ ಔಷಧಿ ಹೆಚ್ಚಾಗಿ ಪತ್ತೆಯಾಗಿದ್ದು, ಕೆಮ್ಮು, ಜ್ವರ ಮೈಕೈ ನೋವು, ಮಲ್ಟಿ ವಿಟಮಿನ್ ಸಿರಪ್ ಬಾಟಲ್‌ಗಳು ಬಿದ್ದಿವೆ. ವೈದ್ಯರ ಸ್ಯಾಂಪಲ್‌ಗಳು ಮಾರಾಟಕ್ಕಿಲ್ಲ ಅನ್ನೋ ಬರಹಗಳು ಔಷಧಿ ಬಾಟಲ್‌ಗಳ ಮೇಲೆ ಬರೆಯಲಾಗಿದೆ. ಹೀಗಾಗಿ ಇದು ಸರ್ಕಾರಿ ಆಸ್ಪತ್ರೆಗಳ ಸ್ಯಾಂಪಲ್ಲಾ, ಖಾಸಗಿ ವೈದ್ಯರಿಗೆ ನೀಡಿದ ಅಥವಾ ನೀಡಬೇಕಾದ ಸ್ಯಾಂಪಲ್ ಔಷಧಿಗಳೆಂದು ಸಾರ್ವಜನಿಕರು ಗೊಂದಲಕ್ಕೀಡಾಗಿದ್ದಾರೆ.