ಗಣಿತ ಕಠಿಣವಲ್ಲ ಆಸಕ್ತಿದಾಯಕ ವಿಷಯ

ದೇವದುರ್ಗ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಗಣಿತ ಮೇಳದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಪ್ರಯೋಗಗಳನ್ನು ಬಿಇಒ ಮಲ್ಲಿಕಾರ್ಜುನ ವೀಕ್ಷಿಸಿದರು. ಮುಖ್ಯಶಿಕ್ಷಕಿ ಪವಿತ್ರಾ ಯಾಟಗಲ್, ಎಸ್ಡಿಎಂಸಿ ಅಧ್ಯಕ್ಷ ಸಾಬಣ್ಣ, ಶಿಕ್ಷಕಿಯರಾದ ನಾಗರತ್ನಾ, ಸವಿತಾ, ಉಮಾ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ದೇವದುರ್ಗ
  • ಬಿಇಒ
  • ಅಭಿಮತ
ದೇವದುರ್ಗ: ಶಾಲೆ-ಕಾಲೇಜು ಹಂತದಲ್ಲಿ ಗಣಿತ ವಿಷಯದ ಬಗ್ಗೆ ಮಕ್ಕಳಿಗೆ ಸೂಕ್ತ ತಿಳಿವಳಿಕೆ ನೀಡಿದರೆ ಅದು ಕಠಿಣವಾಗುವುದಿಲ್ಲ. ಮಕ್ಕಳು ಕಲಿಯುತ್ತ ಹೋದರೆ ಆಸಕ್ತಿದಾಯಕ ವಿಷಯವಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದ ಪಟೇಲ್ ಓಣಿಯ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಅಜೀಂ ಪ್ರೇಮ್ ಜಿ ಸಂಸ್ಥೆಯಿಂದ ಆಯೋಜಿಸಿದ್ದ ಮಕ್ಕಳ ಗಣಿತ ಕಲಿಕಾ ಮೇಳ ಉದ್ಘಾಟಿಸಿ ಸೋಮವಾರ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಯಾವುದೇ ವಿಷಯ ಕಠಿಣವಲ್ಲ. ಅವರ ಆಸಕ್ತಿ ಮೇಲೆ ಕಲಿಕೆ ಅವಲಂಬಿತವಾಗಿದೆ. ಶಿಕ್ಷಕರು ಮಕ್ಕಳಿಗೆ ಪ್ರತಿಯೊಂದು ವಿಷಯವನ್ನು ಸರಳವಾಗಿ, ಅರ್ಥವಾಗುವಂತೆ ಮನರಂಜನೆಯಿಂದ ಬೋಧನೆ ಮಾಡಬೇಕು ಎಂದರು.
ವಿದ್ಯಾರ್ಥಿಗಳು ಪ್ರಸ್ತುತ ದಿನಗಳಲ್ಲಿ ಅಂಕಗಳಿಸುವ ಯಂತ್ರಗಳಾಗಿದ್ದು ಪಾಲಕರು ಮಕ್ಕಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಅಂಕಗಳಿಸುವ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯಗಳನ್ನು ಬಿತ್ತಬೇಕು. ಉತ್ತಮ ಪ್ರಜೆಗಳಾಗಿ ರೂಪಿಸಬೇಕು ಎಂದರು. ಬಿಆರ್‌ಪಿ ಸುರೇಶ, ಶಿಕ್ಷಕರಾದ ನಳಿನಿ, ಗುರುಸ್ವಾಮಿ, ಶಿವಲೀಲಾ, ಮೀನಾಕ್ಷಿ, ಸುಷ್ಮಾ, ಯಾಸ್ಮೀನ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net