ಬೇಡಿದ ವರ ಕೊಡುತ್ತಾನೆ ಮಾರುತಿ

ಹುಸೇನಪೂರ ಗ್ರಾಮದಲ್ಲಿ ಮಾರುತಿ, ಈಶ್ವರ, ಬಸವಣ್ಣ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ನವಲಕಲ್ ಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಕಲ್ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ನಾಗಯ್ಯ ಗುರುವಿನ, ಸಿದ್ದಯ್ಯ ಸ್ವಾಮಿ, ಅಯ್ಯಪ್ಪ ತಾತ ಹೀರಾ, ಶಿವಲಿಂಗಪ್ಪಗೌಡ, ಯಮನಪ್ಪ ದಿನ್ನಿ, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಜಿಪಂ ಮಾಜಿ ಸದಸ್ಯ ಕಿರಿಲಿಂಗಪ್ಪ, ಈರಣ್ಣ ಸಾಹುಕಾರ, ದೇವಣ್ಣ ನಾಯಕ, ರಾಜಸಾಬ್, ಎಚ್.ಬಸವರಾಜ ಭಾಗಿಯಾಗಿದ್ದರು.

Published on

ಕವಿತಾಳ: ಮಾರುತಿ ದೇವರ ಕೃಪೆಯಿಂದ ಶನಿದೇವರ ಕಾಟ ತಪ್ಪಲಿದೆ ಎಂದು ನವಲಕಲ್ ಬೃಹನ್ಮಠದ ಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಹುಸೇನಪೂರ ಗ್ರಾಮದಲ್ಲಿ ಮಾರುತಿ, ಈಶ್ವರ, ಬಸವಣ್ಣ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಶನಿವಾರ ಆಶೀರ್ವಚನ ನೀಡಿದರು. ಮಾರುತಿ ದೇವರು ಬೇಡಿದ ವರ ಕೊಡುವನು ಎನ್ನುವುದು ಭಕ್ತರ ನಂಬಿಕೆಯಾಗಿದೆ ಎಂದರು.
ಎಂಎಲ್ಸಿ, ಮಾಜಿ ಸಚಿವ ಎನ್.ಎಸ್..ಬೋಸರಾಜು ಮಾತನಾಡಿ, ಹುಸೇನಪೂರ ಗ್ರಾಮದ ಆಂಜನೇಯ ಸುತ್ತಮುತ್ತಲಿನ ಗ್ರಾಮದ ಆರಾಧ್ಯ ದೈವವಾಗಿದ್ದಾನೆ. ಹಿಂದು-ಮುಸ್ಲಿಮರು ಒಗ್ಗಟ್ಟಿನೊಂದಿಗೆ ಆಂಜನೇಯ ಮೂರ್ತಿ ಪ್ರತಿಷ್ಠಾಪಿಸುವ ಮುಖಾಂತರ ಭಾವೈಕ್ಯ ಸಾರಿದ್ದಾರೆ ಎಂದರು.
ಕಲ್ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಶಾಸಕ ಹಂಪಯ್ಯನಾಯಕ, ತಿಮ್ಮಣ್ಣ ನಾಯಕ, ಜಿಪಂ ಮಾಜಿ ಸದಸ್ಯ ಕಿರಿಲಿಂಗಪ್ಪ, ಸಿದ್ದಲಿಂಗಪ್ಪ ಸಾಹುಕಾರ ಬುದ್ದಿನ್ನಿ, ಮಲ್ಲಿಕಾರ್ಜುನ ಹೀರಾ, ಶರಣು ಸಾಹುಕಾರ ಚಿಂಚರಕಿ, ಶಿವಲಿಂಗಪ್ಪಗೌಡ, ಪಪಂ ಸದಸ್ಯ ಮಲ್ಲಿಕಾರ್ಜುನ ಪಾಟೀಲ್, ಅಯ್ಯಪ್ಪ ನಿಲೋಗಲ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net