ಮಾನ್ವಿಯ ಕೋನಾಪುರ ಪೇಟೆಯಲ್ಲಿ ಶ್ರೀ ಮಾರಿಕಾಂಬೆ ದೇವಿ ಉಚ್ಚಾಯ ಮಹೋತ್ಸವ ಜರುಗಿತು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶ್ರೀ ಮಾರಿಕಾಂಬೆ ದೇವಿ
ಜಾತ್ರೋತ್ಸವ
ಉಡಿತುಂಬುವ ಕಾರ್ಯಕ್ರಮ
ಮಾರಿಕಾಂಬೆ ದೇವಿ ಉಚ್ಚಾಯ ಅದ್ದೂರಿ
ಮಾನ್ವಿ: ಪಟ್ಟಣದ ಕೋನಾಪುರ ಪೇಟೆಯ ಶ್ರೀ ಮಾರಿಕಾಂಬೆ ದೇವಿಯ ಜಾತ್ರೋತ್ಸವದ ನಿಮಿತ್ತ ಮಂಗಳವಾರ ಬೆಳಗ್ಗೆ ಮಾರಿಕಾಂಬೆ ದೇವಿಗೆ ವಿಶೇಷ ಪೂಜೆ ಹಾಗೂ ಉಡಿತುಂಬುವ ಕಾರ್ಯಕ್ರಮ ಜರುಗಿತು.
ಸಂಜೆ ಪಲ್ಲಕ್ಕಿ ಉತ್ಸವ ಹಾಗೂ ಉತ್ಸವ ಮೂರ್ತಿಯನ್ನು ಉಚ್ಚಾಯದಲ್ಲಿ ಕೂಡಿಸಿ ವಿವಿಧ ಜನಪದ ವಾದ್ಯ ಮೇಳದೊಂದಿಗೆ ಉಚ್ಚಾಯ ಮಹೋತ್ಸವ ನೆರವೇರಿತು.
ದೇವಸ್ಥಾನ ಸಮಿತಿ ಅಧ್ಯಕ್ಷ ಶ್ರೀನಿವಾಸ, ರಾಜ್ಯ ಕುರುಬರ ಸಂಘದ ರಾಜ್ಯಾಧ್ಯಕ್ಷ ಎಂ.ಈರಣ್ಣ, ಜೆಡಿಎಸ್ ರಾಜ್ಯ ಯುವ ಘಟಕದ ರಾಜ್ಯ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ಪ್ರಮುಖರಾದ ಕೆ.ಬಸವಂತಪ್ಪ, ಡಿ.ರಾಮಕೃಷ್ಣ, ಗುರುಸಿದ್ದಪ್ಪ ಕಣ್ಣೂರು, ರೇಣುಕರೆಡ್ಡಿ ಇತರರಿದ್ದರು.