ಯುವಕರು ನಮ್ಮ ಸಂಸ್ಕೃತಿಯನ್ನು ಮರೆಯದೆ ಸಾಹಿತ್ಯದ ಕಡೆ ಆಸಕ್ತಿ ತೋರಬೇಕು. ತಾಲೂಕಿನವಾರ ಶಂಕರಗೌಡ ಕಲಾವಿದರಾಗಿದ್ದು, ಸಂಗೀತ ಕ್ಷೇತ್ರದಲ್ಲಿ ಸಿದ್ದರಾಮ ಜಂಬಲದಿನ್ನಿ, ಸಾಹಿತ್ಯ ಕ್ಷೇತ್ರದಲ್ಲಿ ಚನ್ನಬಸವಪ್ಪ ಬೆಟ್ಟದೂರು, ಡಾ.ರಾಜಶೇಖರ ನೀರಮಾನ್ವಿ ಅವರು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. 2ಸಾವಿರ ವರ್ಷಗಳ ಇತಿಹಾಸ ಹೊಂದಿದ ತಾಲೂಕಿನ ಕರಡಿಗುಡ್ಡ, ದದ್ದಲ, ಇತರೆ ಗ್ರಾಮಗಳು ಇತಿಹಾಸ ಹೊಂದಿವೆ. ಕಲ್ಯಾಣ ಚಾಲುಕ್ಯರ ಆಳ್ವಿಕೆಯಲ್ಲಿ ಸಾಕಷ್ಟು ಮಹಿಳೆಯರು ಈ ನಾಡನ್ನು ಆಳಿದ್ದಾರೆ. ಪ್ರಾರಂಭದಲ್ಲಿ ಸಂಸ್ಕೃತ ಪ್ರಾಕೃತಭಾಷೆಗಳ ನಡುವಿನ ಸೆಣಸಾಟವನ್ನು ಎದುರಿಸಿದ ಕನ್ನಡ, ನಂತರ ಫ್ರೆಂಚ್, ಡಚ್ ಮತ್ತು ಮರಾಠಿ ಭಾಷೆಗಳ ಪ್ರಭಾವವನ್ನೂ ತಡೆದುಕೊಂಡಿದೆ. ಇಂದಿನ ಸಂದರ್ಭದಲ್ಲಿ ಇಂಗ್ಲಿಷ್, ಹಿಂದಿ ಹಾಗೂ ಅನ್ಯ ರಾಜ್ಯಗಳ ಭಾಷೆೆಗಳ ನಡುವೆ ನಲುಗುತ್ತಿದೆ ಯಾದರೂ ಕನ್ನಡವನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಕನ್ನಡಿಗರ ಕೈಯಲ್ಲಿದೆ ಎಂದರು.