ಮಾನ್ವಿ ತಾಲೂಕು ಪಂಚಾಯಿತಿ ಕಚೇರಿ ಪೀಠೋಪಕರಣ ಜಪ್ತಿ

ಮಾನ್ವಿ ತಾಪಂ ಕಚೇರಿ ಪೀಠೋಪಕರಣಗಳನ್ನು ಸೋಮವಾರ ಜಪ್ತಿ ಮಾಡಲಾಯಿತು.
ಮಾನ್ವಿ ತಾಪಂ ಕಚೇರಿ ಪೀಠೋಪಕರಣಗಳನ್ನು ಸೋಮವಾರ ಜಪ್ತಿ ಮಾಡಲಾಯಿತು.
Published on
ಮಾನ್ವಿ ತಾಲೂಕು ಪಂಚಾಯಿತಿ ಕಚೇರಿ ಪೀಠೋಪಕರಣ ಜಪ್ತಿ, ಬಾಕಿ ಹಣನೀಡದಕ್ಕೆ
ಪೋತ್ನಾಳದ ಬಾಲಾಜಿ ಹಾರ್ಡ್‌ವೇರ್ ಅಂಗಡಿಯಿಂದ ಅಂದಾಜು ಆರು ಲಕ್ಷ ರೂ. ಮೌಲ್ಯದ ಸಾಮಗ್ರಿಗಳನ್ನು ಗ್ರಾಪಂಗೆ ಖರೀದಿಸಿತ್ತು. ಖರೀದಿ ಸಾಮಗ್ರಿಗಳಿಗೆ ಹಣ ಪಾವತಿಸುವಂತೆ ಅಂಗಡಿ ಮಾಲೀಕ ರಾಮಕೃಷ್ಣ ಮನವಿ ಮಾಡಿದ್ದರೂ ಪ್ರಯೋಜನವಾಗದ ಕಾರಣ ನ್ಯಾಯಾಲಯ ಮೆಟ್ಟಿಲೇರಿದ್ದರು. ಇವರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಹಣ ಪಾವತಿಸುವಂತೆ ಆದೇಶಿದರೂ ಪಾವತಿ ಮಾಡಿರಲಿಲ್ಲ. ಕಳೆದ ತಿಂಗಳು ನ್ಯಾಯಾಲಯ ಆದೇಶದಂತೆ ಗ್ರಾಪಂ ಪೀಠೋಪಕರಣಗಳನ್ನು ಜಪ್ತಿ ಮಾಡಲಾಗಿತ್ತು.
ಈಗ ತಾಪಂನ ಎಲ್ಲ ಪೀಠೋಪಕರಣ, ಗಣಕಯಂತ್ರಗಳು, ಇತರ ಸಾಮಗ್ರಿಗಳನ್ನು ಜಪ್ತಿ ಮಾಡುವಂತೆ ಕೋರ್ಟ್ ಆದೇಶ ನೀಡಿದೆ. ಅದರಂತೆ ವಕೀಲ ವೀರನಗೌಡ ಪೋತ್ನಾಳ್ ಮೂಲಕ ಅಂಗಡಿ ಮಾಲೀಕರು, ನ್ಯಾಯಾಲಯದ ಸಿಬ್ಬಂದಿ ಜಪ್ತಿ ಮಾಡಿಕೊಂಡು ಕೋರ್ಟ್‌ಗೆ ಒಪ್ಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net