ಡಿಸೆಂಬರ್ ಹಾಗೂ ಜನವರಿ ತಿಂಗಳಿನಲ್ಲಿ ಸುರಿದ ಅಕಾಲಿಕ ಮಳೆಯಿಂದ ಜಿಲ್ಲೆಯಲ್ಲಿ 1000 ಹೇಕ್ಟರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ರಾಯಚೂರು ತಾಲೂಕಿನ ಚಂದ್ರಬಂಡಾ ಹೋಬಳಿ , ಯರಗೇರಾ ,ತುಂಗಭದ್ರಾ ,ಕೃಷ್ಣ ನದಿ ದಡದ ಗ್ರಾಮಗಳಲ್ಲಿ ಮಾವುನ್ನು ಯತೇಚ್ಛವಾಗಿ ಬೆಳೆಯಾಗುತ್ತದೆ. ಆದರೆ ಈ ಬಾರಿ ಮಾತ್ರ ಫಲಲು ಅಂದುಕೊಂಡಂತೆ ಬಂದಿಲ್ಲ. ಮಾವು ಬೆಳೆಯುವ ರೈತರಿದ್ದು ಎಕರೆಗೆ ಕನಿಷ್ಠ 10 ಟನ್‌ನಿಂದ ನಿಂದ 15 ಟನ್‌ವರೆಗೆ ಇಳುವರಿ ತೆಗೆಯಬಹುದು ಆದರೆ, ಈ ಬಾರಿ ಕೇವಲ 5 ರಿಂದ 6 ಟನ್ ಮಾತ್ರ ಇಳುವರಿ ಬಂದಿದ್ದು, ಅದು ಕೂಡ ಉತ್ತಮ ಫಸಲು ಎನ್ನುವಂತಿಲ್ಲ. ಇದರಿಂದ ರೈತರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವಂತಾಗಿದೆ.ಮಾವಿನ ತೋಟ ಹೊಂದಿದ ಮಾಲೀಕರು ತೋಟದಲ್ಲಿ 100 ಮಾವಿನಗಿಡಕ್ಕೆ ವರ್ಷಕ್ಕೆ ಈ ಬಾರಿ 4 ಲಕ್ಷ ರೂ.ದಂತೆ ತೋಟವನ್ನು ಲಿಜ್ ಗೆ ನೀಡುತ್ತಿದ್ದು, ಈ ಬಾರಿ ಲಿಜ್ ಪಡೆದವರ ಪರಸ್ಥಿತಿ ಚಿಂತಾಜನಕವಾಗಿದ್ದು, ಒಂದು ಮಾವಿನ ತೋಟಕ್ಕೆ ಔಷಧ, ರಸಗೊಬ್ಬರ ಸೇರಿ ಸುಮಾರು 8 ಲಕ್ಷ ರೂ.ಖರ್ಚಾಗಿದ್ದು, ಹಾಕಿದ ಬಂಡವಾಳದಲ್ಲಿ ಕೇವಲ 2 ಲಕ್ಷ ರೂ. ಮಾತ್ರ ಬಂದರೆ ಸಾಕು ಎಂದು ಮಾವು ಬೆಳೆಗಾಗರರು ಪರದಾಡುತ್ತಿದ್ದಾರೆ.