ಕಾಯ್ದೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ

ಸಿರವಾರ ಠಾಣೆಯಲ್ಲಿ ಆಯೋಜಿಸಿದ್ದ ಎಸ್ಸಿ-ಎಸ್ಟಿ ಕುಂದು ಕೊರತೆ ಸಭೆಯಲ್ಲಿ ಡಿವೈಎಸ್ಪಿ ಚಂದ್ರಶೇಖರ ಮಾತನಾಡಿದರು. ತಹಸೀಲ್ದಾರ್ ಅಶೋಕ ಪವಾರ್, ತಾಪಂ ಇಒ ಮಂಜುನಾಥ ಜಾವೂರು, ಸಿಪಿಐ ಶಶಿಕಾಂತ ಎಂ., ಹಂಪಯ್ಯ ಪಾಟೀಲ್ ಇತರರಿದ್ದರು.
ಸಿರವಾರ ಠಾಣೆಯಲ್ಲಿ ಆಯೋಜಿಸಿದ್ದ ಎಸ್ಸಿ-ಎಸ್ಟಿ ಕುಂದು ಕೊರತೆ ಸಭೆಯಲ್ಲಿ ಡಿವೈಎಸ್ಪಿ ಚಂದ್ರಶೇಖರ ಮಾತನಾಡಿದರು. ತಹಸೀಲ್ದಾರ್ ಅಶೋಕ ಪವಾರ್, ತಾಪಂ ಇಒ ಮಂಜುನಾಥ ಜಾವೂರು, ಸಿಪಿಐ ಶಶಿಕಾಂತ ಎಂ., ಹಂಪಯ್ಯ ಪಾಟೀಲ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿವೈಎಸ್ಪಿ
  • ಸಲಹೆ
  • ಎಸ್ಸಿ-ಎಸ್ಟಿ ಕುಂದು ಕೊರತೆ ಸಭೆ

ಸಿರವಾರ:

ಡಾ.ಬಿ.ಆರ್.ಅಂಬೇಡ್ಕರ್ ಅವರು ಹಿಂದುಳಿದ ಸಮುದಾಯಗಳನ್ನು ಮುನ್ನೆಲೆಗೆ ತರಬೇಕು ಎಂಬ ಉದ್ದೇಶದಿಂದ ಎಸ್ಸಿ -ಎಸ್ಟಿ ಕಾಯ್ದೆ ಜಾರಿಗೆ ತಂದಿದ್ದು, ಅವುಗಳ ದುರ್ಬಳಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಡಿವೈಎಸ್ಪಿ ಚಂದ್ರಶೇಖರ್ ಹೇಳಿದರು.

ಪೊಲೀಸ್ ಠಾಣೆ ಅವರಣದಲ್ಲಿ ಗುರುವಾರ ಎಸ್ಸಿ-ಎಸ್ಟಿ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು. ಅಸ್ಪ ೃಶ್ಯತೆ ನಿರ್ಮೂಲನೆ ಮಾಡುವುದಕ್ಕೆ ಅನೇಕ ಕಾಯ್ದೆಗಳನ್ನು ಜಾರಿಗೆ ತರಲಾಗಿದ್ದು, ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಠಾಣೆಗೆ ನಿರ್ಭೀತಿಯಿಂದ ಆಗಮಿಸಿ ಪ್ರಕರಣ ದಾಖಲು ಮಾಡಬೇಕು.
ಗಾಂಜಾ ಸೇರಿದಂತೆ ಯಾವುದೇ ಮಾದಕ ವಸ್ತು ಮಾರಾಟ, ಸೇವನೆ ಮಾಡುವ ದೂರುಗಳನ್ನು ಈಗ ಕ್ಯೂ ಆರ್ ಕೋಡ್ ಮೂಲಕ ನೀಡಬಹುದು. ದೂರು ನೀಡಿದವರ ಮಾಹಿತಿ ಗೌಪ್ಯವಾಗಿ ಇಡಲಾಗುವುದು ಎಂದರು.
ಪ್ರಮುಖರಾದ ಕಲ್ಲೂರು ಬಸವರಾಜ ನಾಯಕ, ರಾಜಪ್ಪ ಹೊನ್ನಟಗಿ, ಗಡ್ಲ ಅಮರೇಶ, ವೆಂಕಟೇಶ ದೊರೆ, ಎನ್.ಮಲ್ಲಪ್ಪ, ಅಬ್ರಹಾಂ ಹೊನ್ನಟಗಿ, ಸುಭಾಶ ಚಾಗಭಾವಿ, ಬಸವರಾಜ ಭಂಡಾರಿ, ಎಂ.ಮನೋಹರ, ಜಯಪ್ಪ ಕೆಂಪು, ಚನ್ನಪ್ಪ ಬೂದಿನಾಳ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net