ಜೋಳ ಖರೀದಿ ಹಣ ಪಾವತಿ ಮಾಡಿ

ಸಿಂಧನೂರಿನಲ್ಲಿ ತಹಸೀಲ್ದಾರ್ ಅರುಣ್ ದೇಸಾಯಿಗೆ ರೈತ ಸಂಘ ಹಾಗೂ ಹಸಿರು ಸೇನೆ ಶನಿವಾರ ಮನವಿ ಸಲ್ಲಿಸಿತು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ, ನಾಗರಾಜ ಬಿಂಗಿ, ನಿರುಪಾದೆಪ್ಪ ಅಡ್ಡಿ, ನಿರುಪಾದಿ ಗೋಮರ್ಸಿ ಇತರರಿದ್ದರು.
ಸಿಂಧನೂರಿನಲ್ಲಿ ತಹಸೀಲ್ದಾರ್ ಅರುಣ್ ದೇಸಾಯಿಗೆ ರೈತ ಸಂಘ ಹಾಗೂ ಹಸಿರು ಸೇನೆ ಶನಿವಾರ ಮನವಿ ಸಲ್ಲಿಸಿತು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ, ನಾಗರಾಜ ಬಿಂಗಿ, ನಿರುಪಾದೆಪ್ಪ ಅಡ್ಡಿ, ನಿರುಪಾದಿ ಗೋಮರ್ಸಿ ಇತರರಿದ್ದರು.
Published on
ಸಿಂಧನೂರು: ಹಿಂಗಾರು ಜೋಳ ಖರೀದಿ ಕೇಂದ್ರ ಆರಂಭಿಸಬೇಕೆಂದು ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ಶನಿವಾರ ತಹಸೀಲ್ದಾರ್ ಅರುಣ್ ದೇಸಾಯಿಗೆ ಮನವಿ ಸಲ್ಲಿಸಿತು. 
ಮುಂಗಾರು ಜೋಳ ಬೆಳೆದ ರೈತರು ಖರೀದಿ ಕೇಂದ್ರಕ್ಕೆ ಮಾರಾಟ ಮಾಡಿ ಒಂದೂವರೆ ತಿಂಗಳು ಕಳೆದರೂ ಹಣ ಪಾವತಿಸಿಲ್ಲ. ಜೋಳ ಕಟಾವು ಮಾಡಿ ಐದು ತಿಂಗಳು ಕಳೆದರೂ ಖರೀದಿ ಕೇಂದ್ರ ತಡವಾಗಿ ಆರಂಭಿಸಿರುವುದು ಮತ್ತು ಸರಿಯಾದ ಸಮಯಕ್ಕೆ ಹಣ ಪಾವತಿ ಮಾಡದ ಕಾರಣ ರೈತರು ಸಾಲದ ಸುಳಿಗೆ ಸಿಲುಕುವಂತಾಗಿದೆ. 
ಸರ್ಕಾರ ಎಚ್ಚೆತ್ತುಕೊಂಡು ರೈತರ ಖಾತೆಗೆ ತ್ವರಿತವಾಗಿ ಹಣ ಪಾವತಿ ಮಾಡಬೇಕು. ಹಿಂಗಾರು ಜೋಳ ಖರೀದಿ ವಿಳಂಬದಿಂದ ನುಸಿ ಕಾಣಿಸಿಕೊಳ್ಳುತ್ತಿದ್ದು, ರೈತರಿಗೆ ನಷ್ಟದ ಭೀತಿ ಎದುರಾಗಿದೆ. ಆದ್ದರಿಂದ ಕೂಡಲೇ ಖರೀದಿಗೆ ಮುಂದಾಗಬೇಕೆಂದು ಒತ್ತಾಯಿಸಿದರು. 
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ, ತಾಲೂಕು ಅಧ್ಯಕ್ಷ ನಾಗರಾಜ ಬಿಂಗಿ, ಕಾರ್ಯದರ್ಶಿ ನಿರುಪಾದೆಪ್ಪ ಅಡ್ಡಿ, ನಿರುಪಾದಿ ಗೋಮರ್ಸಿ, ಬಸವರಾಜ, ಮಲ್ಲೇಶ ಸುಕಾಲಪೇಟೆ, ಶ್ಯಾಮಸುಂದರ ಬೇರ‌್ಗಿ ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net