ಅಡುಗೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ

ಅರಕೇರಾದ ಶ್ರೀ ಸಿದ್ದಯ್ಯ ಹವಾಲ್ದಾರ್ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆಯ ಬಿಸಿಯೂಟ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರವನ್ನು ತಾಪಂ ಇಒ ಬಸವರಾಜ ಹಟ್ಟಿ ಉದ್ಘಾಟಿಸಿದರು. ಬಿಇಒ ಮಲ್ಲಿಕಾರ್ಜುನ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಸವರಾಜ ಕಟ್ಟಿಮನಿ ಇತರರಿದ್ದರು.
ಅರಕೇರಾದ ಶ್ರೀ ಸಿದ್ದಯ್ಯ ಹವಾಲ್ದಾರ್ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆಯ ಬಿಸಿಯೂಟ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರವನ್ನು ತಾಪಂ ಇಒ ಬಸವರಾಜ ಹಟ್ಟಿ ಉದ್ಘಾಟಿಸಿದರು. ಬಿಇಒ ಮಲ್ಲಿಕಾರ್ಜುನ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಸವರಾಜ ಕಟ್ಟಿಮನಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಾಪಂ ಇಒ ಬಸವರಾಜ ಹಟ್ಟಿ ಸಲಹೆ
  • ಅರಕೇರಾದಲ್ಲಿ ತರಬೇತಿ ಕಾರ್ಯಾಗಾರ
ಅರಕೇರಾ: ಶಾಲೆಗಳಲ್ಲಿ ಮಕ್ಕಳಿಗೆ ತಯಾರಿಸುವ ಅಡುಗೆಯಲ್ಲಿ ಶುಚಿ-ರುಚಿ, ಗುಣಮಟ್ಟವನ್ನು ಕಾಯ್ದುಕೊಳ್ಳಬೇಕೆಂದು ಸಿಬ್ಬಂದಿಗೆ ತಾಪಂ ಇಒ ಬಸವರಾಜ ಹಟ್ಟಿ ಸೂಚಿಸಿದರು.
ಪಟ್ಟಣದ ಶ್ರೀ ಸಿದ್ದಯ್ಯ ಹವಾಲ್ದಾರ್ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ, ಜಿಪಂ, ತಾಪಂ, ಅಕ್ಷರ ದಾಸೋಹ ಯೋಜನೆಯಿಂದ ಬಿಸಿಯೂಟ ಅಡುಗೆ ಸಿಬ್ಬಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗಾಗಿ ಬಿಸಿಯೂಟ ಯೋಜನೆ ಜಾರಿಯಲ್ಲಿದೆ. ನಿಯಮಗಳನ್ನು ಪಾಲಿಸುವ ಗುರುತರ ಜವಾಬ್ದಾರಿ ಅಡುಗೆ ಸಿಬ್ಬಂದಿ ಮೇಲಿದೆ ಎಂದರು.
ಬಿಇಒ ಮಲ್ಲಿಕಾರ್ಜುನ ಮಾತನಾಡಿ, ಅಡುಗೆ ತಯಾರಿಸುವಾಗ ಯಾವುದೇ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಮಧ್ಯಾಹ್ನದ ಬಿಸಿಯೂಟ ಯೋಜನೆಯಿಂದ ಮಕ್ಕಳ ಆರೋಗ್ಯ ಪೋಷಣೆ, ಶಾಲಾ ದಾಖಲಾತಿ, ಹಾಜರಾತಿ ಪ್ರಮಾಣ, ಶೈಕ್ಷಣಿಕ ಪ್ರಗತಿ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ ಎಂದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಸವರಾಜ ಕಟ್ಟಿಮನಿ ಮಾತನಾಡಿ, ಅಡುಗೆ ಸಿಬ್ಬಂದಿ ಸಮನ್ವಯದಿಂದ ಕೆಲಸ ನಿರ್ವಹಿಸಬೇಕು. ಅಡುಗೆ ಸಾಮಗ್ರಿ ಮತ್ತು ಗ್ಯಾಸ್ ಸಿಲಿಂಡರ್ ಸುರಕ್ಷಿತವಾಗಿ ಬಳಕೆ ಮಾಡಬೇಕು ಎಂದರು.
ಅಗ್ನಿಶಾಮಕ ಸಿಬ್ಬಂದಿಯಿಂದ ಸಿಲಿಂಡರ್‌ಗೆ ಬೆಂಕಿ ಸ್ಪರ್ಶಿಸಿದಾಗ ನಂದಿಸುವ ಪ್ರಾತ್ಯಕ್ಷಿಕೆ ಪ್ರದರ್ಶನ ನೀಡಲಾಯಿತು. ಕ್ಷೇತ್ರ ಸಮನ್ವಯಾಧಿಕಾರಿ ಶಿವರಾಜ ಪೂಜಾರಿ, ಪಿಡಿಒ ವೆಂಕೋಬ ನಾಯಕ, ಅಕ್ಷರ ದಾಸೋಹ ಅಧಿಕಾರಿ ರಮೇಶ ಅಕ್ಕರಕಿ, ಸಿಆರ್‌ಪಿ ಬಸವರಾಜ, ಹಿರಿಯ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ನಾಯಕ, ಮುಖ್ಯಶಿಕ್ಷಕ ಹುಸೇನ್ ಬಾಷಾ, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಹನುಮೇಶ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net