ರಾಯಚೂರು ಭಗವಾನ್ ಮಹಾವೀರ ಜಯಂತಿ ಅಂಗವಾಗಿ ನಗರದಲ್ಲಿ ಜೈನ್ ಸಮುದಾಯದಿಂದ ಅದ್ದೂರಿ ಮೆರವಣಿಗೆಯನ್ನು ಸೋಮವಾರ ನಡೆಸಲಾಯಿತು.
ಪೂರ್ಣಕುಂಭಗಳೊಂದಿಗೆ ಮಹಿಳೆಯರು ನಗರದ ತೀನ್ ಕಂದೀಲ್, ಬಟ್ಟೆ ಬಜಾರ, ಮಹಾವೀರ ವೃತ್ತದಿಂದ ಸೂಪರ್ ಮಾರ್ಕೆಟ್ ಮೂಲಕ ದಿಗಂಬರ ಜೈನ್ ಮಂದಿರಕ್ಕೆ ಆಗಮಿಸಲಾಯಿತು. ಮೆರವಣಿಗೆಯಲ್ಲಿ ಮಹಾವೀರ ಸಂದೇಶದ ಬದುಕಿ, ಬದುಕಲು ಬಿಡಿ ಎನ್ನುವ ಚಿತ್ರಗಳು ಗಮನ ಸೆಳೆದವು. ಜಯಂತಿ ಅಂಗವಾಗಿ ಪಂಚಾಮೃತ ಅಭಿಷೇಕ, ತೊಟ್ಟಿಲು ಸೇವೆ ಸೇರಿ ಅನೇಕ ಪೂಜಾ ಕಾರ್ಯಗಳು ನಡೆದವು.
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಮಹಾವೀರ ಜೈನ್ , ಭೀಮರಾವ್, ಪ್ರಕಾಶ ಹರದರ, ಜೀತೇಂದ್ರ ಹರದರ, ಎಚ್.ಬಿ. ಪ್ರಸಾದ ಜೈನ್, ಉದಯಕುಮಾರ ಜೈನ್, ಕಿರಣ ಹರದರ, ಶ್ರೀಪಾದರ ಹರದರ ಸೇರಿದಂತೆ ಮಹಿಳೆಯರು, ದಿಗಂಬರ್ ಜೈನ್ ಸಮುದಾಯ ಜನರು ಇದ್ದರು.